EBM News Kannada
Leading News Portal in Kannada

ದತ್ತಾಂಶ ಸಂರಕ್ಷಣಾ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ; ಏನಿದು ಡೇಟಾ ಪ್ರೊಟೆಕ್ಷನ್ ಬಿಲ್? – Kannada News | Digital Personal Data Protection Bill passed by a voice vote In Lok Sabha

0


Digital Personal Data Protection Bill: ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ದತ್ತಾಂಶ ಸಂರಕ್ಷಣಾ ಮಸೂದೆ ಅಥವಾ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (ಡಿಪಿಡಿಪಿ) ಮಸೂದೆಯನ್ನು ಲೋಕಸಭೆಯಲ್ಲಿ ಧ್ವನಿ ಮತದಿಂದ ಅಂಗೀಕರಿಸಲಾಯಿತು

ದೆಹಲಿ ಆಗಸ್ಟ್ 07: ಪ್ರತಿಪಕ್ಷಗಳು ಎತ್ತಿರುವ ಖಾಸಗಿತನದ ಕಳವಳಗಳ ನಡುವೆಯೂ ಡೇಟಾ ಉಲ್ಲಂಘನೆಗೆ ಭಾರೀ ದಂಡವನ್ನು ವಿಧಿಸುವ ಹೊಸ ಡಿಜಿಟಲ್ ಹಕ್ಕುಗಳ ಕಾನೂನಿಗೆ ಲೋಕಸಭೆ (Lok sabha) ಇಂದು (ಸೋಮವಾರ) ಅನುಮೋದನೆ ನೀಡಿದೆ. ಮಣಿಪುರ (Manipur) ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆಯೇ ದತ್ತಾಂಶ ಸಂರಕ್ಷಣಾ ಮಸೂದೆ ಅಥವಾ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (Digital Personal Data Protection (DPDP) Bill) ಮಸೂದೆಯನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಪ್ರತಿಪಕ್ಷಗಳು ಕೆಲವು ತಿದ್ದುಪಡಿಗಳನ್ನು ಕೋರದ್ದರೂ ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲ.

ಪ್ರಸ್ತಾವಿತ ಶಾಸನವನ್ನು ಸಂಸತ್ತಿನ ಸಮಿತಿಯ ಪರಿಶೀಲನೆಗೆ ಉಲ್ಲೇಖಿಸುವ ಬೇಡಿಕೆಗಳ ನಡುವೆ ಕಳೆದ ಗುರುವಾರ ಕೆಳಮನೆಯಲ್ಲಿ ಮಂಡಿಸಲಾಯಿತು.

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆಯನ್ನು ಪರಿಗಣನೆಗೆ ಮಂಡಿಸಿದ್ದು, ಪ್ರತಿಪಕ್ಷದ ಸದಸ್ಯರು ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿ ವಹಿಸದ ಕಾರಣ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರತಿ ಡೇಟಾ ಉಲ್ಲಂಘನೆಗೆ ₹ 250 ಕೋಟಿ ದಂಡ ವಿಧಿಸುವ ನಿಬಂಧನೆಯನ್ನು ಮಸೂದೆ ಒಳಗೊಂಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

Published On – 4:17 pm, Mon, 7 August 23

ತಾಜಾ ಸುದ್ದಿ

Leave A Reply

Your email address will not be published.