EBM News Kannada
Leading News Portal in Kannada

Chandrayaan-3 Mission: ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3 – Kannada News | Chandrayaan 3 successfully reaches lunar orbit ISRO

0


ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರಂದು ಚಂದ್ರಯಾನ-3 ನೌಕೆ ಉಡ್ಡಯನ ಮಾಡಲಾಗಿತ್ತು. ಇದೀಗ ನೌಕೆಯು ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ತಿಳಿಸಿದೆ.

ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ-3

ನವದೆಹಲಿ, ಆಗಸ್ಟ್ 5: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಾಕಾಂಕ್ಷಿ ಚಂದ್ರಯಾನ-3 (Chandrayaan-3) ನೌಕೆ ಇಂದು (ಆಗಸ್ಟ್ 5) ಸಂಜೆ 7.15ಕ್ಕೆ ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಉಡ್ಡಯನ ಮಾಡಲಾಗಿತ್ತು.

ಈ ವಾರದ ಆರಂಭದಲ್ಲಿ ಭೂಮಿಯಿಂದ ನಿರ್ಗಮಿಸಿದ ನಂತರ, ಚಂದ್ರಯಾನ-3 ಚಂದ್ರನ ಪ್ರಭಾವದ ಗೋಳವನ್ನು ಪ್ರವೇಶಿಸಿತ್ತು. ನಂತರ ಸುರಕ್ಷಿತವಾಗಿ ಚಂದ್ರನ ಸುತ್ತ ಸುತ್ತುತ್ತಿದೆ ಎಂದು ಇಸ್ರೋ ಖಚಿತಪಡಿಸಿತ್ತು. ನಿರೀಕ್ಷಿಸಿದಂತೆ, ಚಂದ್ರಯಾನ-3 ಈಗ ದೀರ್ಘವೃತ್ತದ ಮಾರ್ಗವನ್ನು ಅನುಸರಿಸುತ್ತಿದೆ, ಭೂಮಿಗೆ ಅದರ ಹತ್ತಿರದ ಬಿಂದು (ಪೆರಿಜಿ) ಮತ್ತು ಅತ್ಯಂತ ದೂರದ ಬಿಂದು (ಅಪೋಜಿ) ನಡುವೆ ಚಲಿಸುತ್ತಿದೆ ಎಂದು ಇಸ್ರೋ ಈ ಹಿಂದೆ ತಿಳಿಸಿತ್ತು.

ಚಂದ್ರಯಾನ 3, ಚಂದ್ರಯಾನ 2 ರಂತೆ ಯಾವುದೇ ಆರ್ಬಿಟರ್ ಹೊಂದಿಲ್ಲ. ಒಂದು ಲ್ಯಾಂಡರ್ ಮತ್ತು ಒಂದು ರೋವರ್ ಅನ್ನು ಹೊಂದಿದೆ. ಇವೆರಡು ಚಂದ್ರನ ಮೇಲ್ಮೈಯಲ್ಲಿ ಒಂದು ಲೂನಾರ್ ದಿನ (ಚಂದ್ರನ ದಿನ) ಅಂದರೆ, ಭೂಮಿಯ ಲೆಕ್ಕಾಚಾರದಲ್ಲಿ 14 ದಿನಗಳು ಕಾರ್ಯಾಚರಿಸಲಿವೆ. ಒಂದು ಬಾರಿ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ, ರೋವರ್ ಅದರಿಂದ ಬಿಡುಗಡೆಯಾಗಿ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿ, ಪ್ರಯೋಗಗಳನ್ನು ನಡೆಸಿ, ಮಾಹಿತಿ ಕಲೆಹಾಕಲಿದೆ.

Published On – 8:54 pm, Sat, 5 August 23

ತಾಜಾ ಸುದ್ದಿ

Leave A Reply

Your email address will not be published.