EBM News Kannada
Leading News Portal in Kannada

ಜ್ಞಾನವಾಪಿ ಮಸೀದಿಯ 3ನೇ ದಿನದ ಸಮೀಕ್ಷೆ ಮುಕ್ತಾಯ, ವಿಗ್ರಹಗಳ ಅವಶೇಷಗಳು ಪತ್ತೆ – Kannada News | Gyanvapi Mosque 3rd day survey concludes, ASI Team discovers remains of frangmented idols

0


Gyanvapi Mosque Survey: ಜ್ಞಾನವಾಪಿ ಮಸೀದಿಯ ಪುರಾತತ್ವ ಇಲಾಖೆಯ ಸಮೀಕ್ಷೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎಎಸ್​ಐ ತಂಡವು ಇಂದಿನ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿತ್ತು, ಮೂರು ವಿಗ್ರಹಗಳು ದೊರೆತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜ್ಞಾನವಾಪಿ ಮಸೀದಿ

ಜ್ಞಾನವಾಪಿ ಮಸೀದಿ(Gyanvapi Mosque)ಯ ಪುರಾತತ್ವ ಇಲಾಖೆಯ ಸಮೀಕ್ಷೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎಎಸ್​ಐ ತಂಡವು ಇಂದಿನ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿತ್ತು, ಮೂರು ವಿಗ್ರಹಗಳು ದೊರೆತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶನಿವಾರದಂದು, 17 ನೇ ಶತಮಾನದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ಸಮೀಕ್ಷೆ ಪುನರಾರಂಭವಾಯಿತು. ASI ತಂಡವು ಮಧ್ಯಾಹ್ನದ ಸುಮಾರಿಗೆ ಸಮೀಕ್ಷೆಯನ್ನು ವಿರಾಮಗೊಳಿಸಿತು, ಮುಸ್ಲಿಮರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅನುಮತಿ ನೀಡಿತು ಮತ್ತು ಮಧ್ಯಾಹ್ನ 2.30 ಕ್ಕೆ ಅದನ್ನು ಪುನರಾರಂಭಿಸಿತು.

ಈ ನಡುವೆ, ದೇವಾಲಯದ ಕಡೆಯವರು ಗುಮ್ಮಟದ ಕೆಳಗಿರುವ ಕೊಠಡಿಯನ್ನು ಜಿಪಿಆರ್ ಪರೀಕ್ಷೆಗೆ ಒತ್ತಾಯಿಸಿದ್ದಾರೆ. ಇದು ಮುಖ್ಯ ಗುಮ್ಮಟದ ಅಡಿಯಲ್ಲಿರುವ ಆದಿ ವಿಶ್ವೇಶ್ವರ ದೇವಸ್ಥಾನದ ಗರ್ಭಗುಡಿಯಾಗಿದೆ. ಇದರಿಂದ ಅಲ್ಲಿ ಏನಿದೆ ಎಂಬುದು ಸ್ಪಷ್ಟವಾಗುತ್ತದೆ. ಎಎಸ್‌ಐ ತಂಡವು ಜ್ಞಾನವಾಪಿಯಲ್ಲಿ ಬೆಳಗ್ಗೆ 8.00 ಗಂಟೆಯಿಂದ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಹಿಂದೂ ಪರ ವಕೀಲರಾದ ವಿಷ್ಣು ಶಂಕರ್ ಜೈನ್ ಮತ್ತು ಸುಧೀರ್ ತ್ರಿಪಾಠಿ ಕೂಡ ಜ್ಞಾನವಾಪಿ ಮಸೀದಿಗೆ ಬಂದಿದ್ದರು.

ಮತ್ತಷ್ಟು ಓದಿ: Gyanvapi Mosque: ವಾರಾಣಸಿ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ತಾತ್ಕಾಲಿಕ ತಡೆ

ವಾರಾಣಸಿ ನ್ಯಾಯಾಲಯವು ಸೆಪ್ಟೆಂಬರ್ 2 ರೊಳಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸುವಂತೆ ಎಎಸ್‌ಐಗೆ ಸೂಚಿಸಿದೆ. ಈ ಹಿಂದೆ ಸರ್ಕಾರಿ ವಕೀಲರು ಎಎಸ್‌ಐಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೋರಿದ್ದರು. ಈ ಸ್ಥಳದಲ್ಲಿ ಆದಿ ವಿಶ್ವೇಶ್ವರ ದೇವಸ್ಥಾನದ ಗರ್ಭಗುಡಿ ಇತ್ತು ಮತ್ತು ಅದರ ಕೆಳಗೆ ಶಿವಲಿಂಗ ಮತ್ತು ಅರ್ಘ ಸೇರಿದಂತೆ ಇತರ ಪುರಾವೆಗಳಿವೆ ಎಂದು ಅವರು ಹೇಳುತ್ತಾರೆ. ನ್ಯಾಯಾಲಯದಲ್ಲಿಯೂ ಹಲವು ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಸ್ತಾಪವಾಗಿದೆ.

ಇಡೀ ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಸಮೀಕ್ಷೆ ನಡೆಸಬೇಕೆಂಬ ಬೇಡಿಕೆಗೆ ಇದು ಪ್ರಮುಖ ಕಾರಣವಾಗಿದೆ. ದೇವಸ್ಥಾನದ ಪರ ವಕೀಲರಾದ ಸುಧೀರ್ ತ್ರಿಪಾಠಿ ಮತ್ತು ಸುಭಾಸ್ನಂದನ್ ಚತುರ್ವೇದಿ ಅವರ ಪ್ರಕಾರ, ಇತಿಹಾಸಕಾರ ಜೇಮ್ಸ್ ಪ್ರಿನ್ಸೆಪ್ ಅವರು ತಮ್ಮ ಪುಸ್ತಕದಲ್ಲಿ ಅಷ್ಟಭುಜಾಕೃತಿಯ ಆದಿ ವಿಶ್ವೇಶ್ವರ ದೇವಸ್ಥಾನದ ನಕ್ಷೆಯನ್ನು ತೋರಿಸಿದ್ದಾರೆ.

ಎಂಟು ಮಂಟಪ ಭೈರವ ಮಂಟಪ, ಐಶ್ವರ್ಯ ಮಂಟಪ, ಶೃಂಗಾರ ಮಂಟಪ, ದಂಡಪಾಣಿ ಮಂಟಪ, ಗಣೇಶ ಮಂಟಪ, ಮುಕ್ತಿ ಮಂಟಪ, ತಾರಕೇಶ್ವರ ಮಂಟಪ, ಜ್ಞಾನ ಮಂಟಪಗಳಿದ್ದವು. ಇವುಗಳ ಮಧ್ಯದಲ್ಲಿ ದೇವಾಲಯದ ಗರ್ಭಗುಡಿ ಇತ್ತು, ಅದರಲ್ಲಿ ಆದಿ ವಿಶ್ವೇಶ್ವರನ ಶಿವಲಿಂಗವಿತ್ತು.

Published On – 11:50 am, Sun, 6 August 23

ತಾಜಾ ಸುದ್ದಿ

Leave A Reply

Your email address will not be published.