Ultimate magazine theme for WordPress.

ಮಹಾರಾಷ್ಟ್ರದಲ್ಲಿ ಒಂದೇ ದಿನ ಕೊರೋನಾಗೆ 18 ಬಲಿ: ಸಾವಿನ ಸಂಖ್ಯೆ 301ಕ್ಕೇರಿಕೆ, ಒಟ್ಟು 6817 ಮಂದಿಗೆ ಸೋಂಕು

0

ಮುಂಬೈ(ಏ.25): ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​ ರೋಗವೂ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ದೇಶಾದ್ಯಂತ ಈ ಸೋಂಕಿನಿಗೆ ದಿನದಿಂದ ದಿನಕ್ಕೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಅಂತೆಯೇ ಮಹಾರಾಷ್ಟ್ರದಲ್ಲಂತೂ ಕೊರೋನಾ ವೈರಸ್ ರೌದ್ರನರ್ತನ ಮೆರೆಯುತ್ತಿದೆ. ಹಾಗಾಗಿಯೇ ಕಳೆದ 24 ಗಂಟೆಗಳಲ್ಲಿ ಸುಮಾರು 18 ಮಂದಿಯನ್ನು ಕೊರೋನಾ ಬಲಿ ತೆಗೆದುಕೊಂಡಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದ 18 ಮಂದಿ ಪೈಕಿ ಮುಂಬೈವೊಂದರಲ್ಲೇ 11 ಮಂದಿ ಸಾವನ್ನಪ್ಪಿದ್ದಾರೆ. ಜತೆಗೆ ಇಂದು ಒಂದೇ ದಿನದಲ್ಲಿ 394 ಕೋವಿಡ್​​-19 ಹೊಸ ಕೇಸಗುಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಕೂಡ 6817ಕ್ಕೆ ಏರಿಕೆಯಾಗಿದೆ ಎಂದು ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಹೇಳಿದೆ.

ಇನ್ನು, ಶಿವಸೇನೆ ಸರ್ಕಾರದ ಪ್ರಕಾರ, 6,817 ಸೋಂಕಿತರ ಪೈಕಿ 957 ಮಂದಿ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದ್ದರಿಂದ ಇದೀಗ 5,559 ಮಂದಿ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 1,02,189 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

Leave A Reply

Your email address will not be published.