Coronavirus Tips: ಕೊರೋನಾ ಬಾರದಂತೆ ತಡೆಯಲು ಇಲ್ಲಿದೆ ಸುಲಭ ಉಪಾಯ!
ಇಡೀ ಜಗತ್ತಿನೆಲ್ಲೆಡೆ ಕೊರೋನಾ ಅಟ್ಟಹಾಸ ಜೋರಾಗಿದೆ. ಅರ್ಧ ಪ್ರಪಂಚ ಕ್ವಾರಂಟೈನ್ ನಲ್ಲೇ ಕಾಲ ಕಳೆಯುತ್ತಿದೆ. ದೇಶದ ಕೆಲವೆಡೆ ಕ್ವಾರಂಟೈನ್ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂಬುದೇನೋ ನಿಜ. ಆದರೆ ಅನೇಕ ಕಡೆ ಕ್ವಾರಂಟೈನ್ ಸಮಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂಬುದು ಕೂಡ ಅಷ್ಟೇ ಸತ್ಯ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಯಾವ ರೀತಿ ಕೊರೋನಾದಿಂದ ರಕ್ಷಿಸಿಕೊಳ್ಳಬೇಕು? ಇಲ್ಲಿದೆ ಮಾಹಿತಿ…
ದೇಶದಲ್ಲಿ ಅನೇಕ ಜನ ತಂತಮ್ಮ ಮನೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ. ಆದರೆ, ನೇರವಾಗಿ ಕೋವಿಡ್-19 ರೋಗಿಯ ಸಂಪರ್ಕಕ್ಕೆ ಬಂದವರನ್ನು ಹೋಟೆಲ್, ಛತ್ರ, ಸಮುದಾಯ ಭವನ ಮುಂತಾದ ಕಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮನೆಯಲ್ಲೇ ಇರಲಿ, ಹೋಟೆಲಿನಲ್ಲೇ ಇರಲಿ… ಕ್ವಾರಂಟೈನ್ ನಲ್ಲಿ ಇರುವವರು ಒಂದಷ್ಟು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
14 ಅಥವಾ 28 ಒಟ್ಟಾರೆ ಆರೋಗ್ಯ ಇಲಾಖೆಯವರು ಹೇಳುವಷ್ಟು ದಿನ ತಪ್ಪದೇ ಕ್ವಾರಂಟೈನ್ ಆಗಲೇಬೇಕು.