ಕುಕ್ಕರ್‌ನಲ್ಲಿಯೇ ಮಾಡಬಹುದು ಈ ಎಗ್‌ಲೆಸ್ ಕೇಕ್!
ಕೊರೊನಾವೈರಸ್‌ನಿಂದಾಗಿ ಲಾಕ್‌ಡೌನ್ ಆಗಿರುವುದರಿಂದ ಮನೆಯಲ್ಲಿ ಯಾರಾದಾದರೂ ಬರ್ತ್‌ಡೇ ಇದ್ದರೆ ಅಯ್ಯೋ ಕೇಕ್ ಇಲ್ಲ ಅಲ್ವಾ ಅಂತ ಅಂದ್ಕೋಬೇಡಿ. ಏಕೆಂದರೆ ನೀವೇ ಸುಲಭವಾಗಿ ಮನೆಯಲ್ಲಿಯೇ ಕೇಕ್ ತಯಾರಿಸಬಹುದು. ಈ ಕೇಕ್ ತಯಾರಿಸಲು ಮೈಕ್ರೋವೇವ್ ಕೂಡ ಬೇಕಾಗಿಲ್ಲ. ಮನೆಯಲ್ಲಿಯೇ ಮಾಡಬಹುದು.
ಇದು ಎಗ್‌ಲೆಸ್ ಕೇಕ್ ಆಗಿದ್ದು ಕೇಕ್ ಸವಿ ನೋಡ ಬಯಸುವವರು ಕೂಡ ಇದನ್ನು ಮಾಡಿ ಸವಿಯಬಹುದು. ಈ ಕೇಕ್‌ನ ರೆಸಿಪಿ ತುಂಬಾ ಸರಳವಾಗಿದೆ ನೋಡಿ.
Simple Eggless Cake Prepared In Cooker, ಕುಕ್ಕರ್‌ನಲ್ಲಿ ಮಾಡಬಹುದಾದ ಎಗ್‌ಲೆಸ್ ಕೇಕ್ ರೆಸಿಪಿ
ಮಾಡುವ ವಿಧಾನ
*. ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ(ಅಡುಗೆ ಸೋಡಾ) ಹಾಗೂ ಮೈದಾ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ.
* ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಬೆಣ್ಣೆ ಜೊತೆ ಮಿಕ್ಸ್ ಮಾಡಿ.
* ಈಗ ಸಕ್ಕರೆ ಮಿಕ್ಸ್‌ಗೆ ಮಂದವಾದ ಹಾಲು ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮೈದಾ ಹಿಟ್ಟಿಗೆ ಅರ್ಧದಷ್ಟು ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕುಕ್ಕರ್ ಬಿಸಿ ಮಾಡಿ ತಳದಲ್ಲಿ ಉಪ್ಪು ಹಾಕಿ, ಇದು ಕುಕ್ಕರ್ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕುಕ್ಕರ್ ಮುಚ್ಚಳ ಹಾಕಿ ಬಿಸಿ ಮಾಡಿ.
* ಮೈದಾಗೆ ಮಂದವಾದ ಹಾಲಿನ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣ ತುಂಬಾ ಮೃದುವಾಗಿರಬೇಕು, ಗಂಟು-ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.
ಉಳಿದ ಹಾಲನ್ನು ಹಾಕಿ ಮಿಶ್ರಣವನ್ನು ಮತ್ತಷ್ಟು ಮೃದು ಮಾಡಿ.
* ಈಗ ಬೌಲ್‌ಗೆ ಬೆಣ್ಣೆ ಸವರಿ, ನಂತರ ಮೈದಾ ಮಿಶ್ರಣ ಉದುರಿಸಿ, ಅದರಲ್ಲಿ ಮಿಶ್ರಣ ಸವರಿ ಅದರಲ್ಲಿ ಹಿಟ್ಟನ್ನು ಸುರಿದು ಬೌಲ್‌ನ ಬಾಯಿ ಮುಚ್ಚಿ ನಂತರ ಕುಕ್ಕರ್ ಮುಚ್ಚಳ ಹಾಕಿ ಬೇಯಿಸಿ. ಆದರೆ ವಿಶಲ್ ಹಾಕಬೇಡಿ.
* ಕಡಿಮೆ ಉರಿಯಲ್ಲಿ 30-40 ನಿಮಿಷ ಬೇಯಿಸಿ. *ಈಗ ಕುಕ್ಕರ್ ಮುಚ್ಚಳ ತೆಗೆದು ಬೌಲ್‌ನ ಮುಚ್ಚಳ ತೆಗೆದು ನೈಫ್‌ನಲ್ಲಿ ಚುಚ್ಚಿ ನೋಡಿ, ಮಿಶ್ರಣ ಬೆಂದಿದ್ದರೆ ಅದರ ಹಿಟ್ಟು ನೈಫ್‌ಗೆ ಅಂಟುವುದಿಲ್ಲ. ಕೇಕ್ ಬೆಂದ ಮೇಲೆ ತಣ್ಣಗಾಗಲು ಬಿಡಿ.