ನಿಪಾ ಹೆದರಿಕೆ: ರಜೆ ಮೇಲೆ ತೆರಳುತ್ತಿರುವ ಡಾಕ್ಟರ್ , ನರ್ಸ್ ಗಳು
ಕೇರಳ: ನಿಪಾ ವೈರಸ್ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಭೀತಿಗೊಂಡ ಬಲ್ಸರಿ ನಾಲ್ವರು ವೈದ್ಯರು, ನರ್ಸ್ ಗಳು ಸೇರಿದಂತೆ ಹಲವು ಮಂದಿ ಸಿಬ್ಬಂದಿ ರಜೆ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಪಾ ಸೋಂಕಿನಿಂದಾಗಿ ಕೇರಳದ ಉತ್ತರ ಜಿಲ್ಲೆಗಳಲ್ಲಿ ಈವರೆಗೂ 16 ಮಂದಿ ಮೃತಪಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಇಬ್ಬರು ಜನರು ನಿಪಾ ವೈರಸ್ ಗೆ ತುತ್ತಾಗಿದ್ದಾರೆ. ತಾಲೂಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಸೋಂಕಿತರು ಕೋಝಿಕೊಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮುಂಚಿತವಾಗಿಯೇ ಮೃತಪಟ್ಟಿದ್ದಾರೆ.
ಈ ಹೆದರಿಕೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ವೈದ್ಯರು, ನರ್ಸ್ ಗಳು ಸೇರಿದಂತೆ ಆಸ್ಪತ್ರೆಯ ಹಲವು ಸಿಬ್ಬಂದಿಗಳು ರಜೆ ಹಾಕಿದ್ದಾರೆ. ಆಸ್ಪತ್ರೆಯ ಕಾರ್ಯ ಚಟುವಟಿಕೆ ಸುಗಮವಾಗಿ ಸಾಗಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ನಿಪಾ ವೈರಸ್ ನಿಂದಾಗಿ ಬಲ್ಸುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೆಸಿನ್ ನಿನ್ನೆ ಮೃತಪಟ್ಟಿದ್ದರು. ನಿಖಿಲ್ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿನ ರೋಗಿಗಳ ದಟ್ಟಣೆ ತಡೆಯುವ ಉದ್ದೇಶದಿಂದ ಸ್ಥಳೀಯ ನೌಕರರ ವಿನಿಮಯ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ವಿಚಾರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಪಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಪರಿಸ್ಥಿತಿ ಕುರಿತು ಕೇರಳ ಹೈಕೋರ್ಟ್ ಗೆ ಕೊಝಿಕೋಡುವಿನ ಜಿಲ್ಲಾಧಿಕಾರಿ ಯು. ವಿ. ಜೊಸೆ ವರದಿ ಸಲ್ಲಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ನಿಪಾದಿಂದಾಗಿ ಕೋಝಿಕೋಡು ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸೂಪರಿಂಟೆಂಡೆಂಟ್ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಕಾರ್ಯ ಕಲಾಪವನ್ನು ರದ್ದುಗೊಳಿಸುವಂತೆ ಬಾರ್ ಅಸೋಸಿಯೇಷನ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದೆ.
ನಿಪಾ ವೈರಿಸ್ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಕೋಝಿಕೋಡು, ಮಲಾಪುರಂ ಜಿಲ್ಲೆಗಳಲ್ಲಿ ಇಂದು ಕೂಡಾ ಶಾಲೆಗಳು ತೆರೆದಿರಲಿಲ್ಲ. ಜೂನ್ 5 ರಿಂದ ಶಾಲೆ ಪುನರ್ ಆರಂಭಗೊಳ್ಳುವ ಸಾಧ್ಯತೆ ಇದೆ.