EBM News Kannada
Leading News Portal in Kannada

ಮುಂಗಾರು ಋತುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಲು ಅಗತ್ಯ ಸಲಹೆಗಳು

0



ಮಳೆಗಾಲ ನಿಮಗೆ ಅಸಾಧ್ಯ ಸೆಖೆಯಿಂದ ಮುಕ್ತಿ ನೀಡುವುದೇನೋ ನಿಜ. ಆದರೆ ಹಲವು ಆರೋಗ್ಯ ಸಮಸ್ಯೆಗಳು ಇಡೀ ಮಳೆಗಾಲದಲ್ಲಿ ನಿಮ್ಮನ್ನು ಕಾಡುತ್ತಿರುತ್ತವೆ. ಸೋಂಕು ಅಥವಾ ಅಸ್ವಸ್ಥತೆಗಳು ಮಳೆಗಾಲದಲ್ಲಿ ಸಾಮಾನ್ಯ. ಇದರಿಂದಾಗಿ ಅಗತ್ಯ ಪ್ರತಿರೋಧ ವ್ಯವಸ್ಥೆ ಅನಿವಾರ್ಯ. ಇಂಥ ಹವಾಮಾನ ಸಂದರ್ಭದ ಅಸ್ವಸ್ಥತೆಯಿಂದ ದೂರ ಇರಬೇಕಾದರೆ ನಮ್ಮ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಆಸ್ತೆರ್ ಸಿಎಂಐ ಆಸ್ಪತ್ರೆಯ ಕ್ಲಿನಿಕ್ ನ್ಯೂಟ್ರೀಶನ್ ಮತ್ತು ಡಯಟಿಸ್ಟಿಕ್ ಸೇವೆಗಳ ವಿಭಾಗದ ಮುಖ್ಯಸ್ಥ ಡಾ.ಎಡ್ವಿನಾ ರಾಜ್ ನಮ್ಮ ಪ್ರತಿರೋಧ ವ್ಯವಸ್ಥೆಯನ್ನು ಬಲಗೊಳಿಸಲು ಮತ್ತು ಆರೋಗ್ಯಕರ ಮಳೆಗಾಲವನ್ನು ಆಸ್ವಾದಿಸಲು ಕೆಲ ಸಲಹೆಗಳನ್ನು ನೀಡಿದ್ದಾರೆ.

1. ಸಮತೋಲಿತ ಮತ್ತು ಪೌಷ್ಟಿಕಾಂಶ ಸಮೃದ್ಧ ಆಹಾರಕ್ರಮ

ಮಳೆಗಾಲದಲ್ಲಿ ಸಮತೋಲಿನ ಆಹಾರ ಕ್ರಮ ಅನುಸರಿಸುವುದು ಮೊದಲನೇ ಅಗತ್ಯ. ಹಲವು ತರಕಾರಿ ಹಾಗೂ ಹಣ್ಣುಗಳು, ಇಡಿಯ ಕಾಳು, ಕ್ಷೀಣ ಪ್ರೊಟಿನ್ ನಿಮ್ಮ ಆಹಾರದ ಭಾಗವಾಗಬೇಕು. ಇವು ಹೆಚ್ಚಿನ ವಿಟಮಿನ್, ಖನಿಜಾಂಶ ಹೊಂದಿದ್ದು, ಇದು ನಿಮ್ಮ ಪ್ರತಿರೋಧ ರಕ್ಷಣಾ ವ್ಯವಸ್ಥೆಗೆ ಪೂರಕ. ಕಿತ್ತಳೆ, ಸೀಬೆ, ಕಿವಿ, ಪಪ್ಪಾಯಿ, ನಿಂಬೆ ಅಧಿಕ ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಇದು ಪ್ರತಿರೋಧ ಶಕ್ತಿ ಹೆಚ್ಚಿಸುತ್ತದೆ. ಅಂತೆಯೇ ಶುಂಠಿ, ಬೆಳ್ಳುಳ್ಳಿ ಮತ್ತು ಅರಸಿನ ಬ್ಯಾಕ್ಟೀರಿಯಾ ಪ್ರತಿರೋಧದ ಅಂಶವನ್ನು ಹೊಂದಿವೆ.

2. ಉತ್ತಮ ನೈರ್ಮಲ್ಯ ಅಭ್ಯಾಸ

ಮಳೆಗಾಲದಲ್ಲಿ ರೋಗ ಹರಡುವುದು ತಡೆಯಲು ಉತ್ತಮ ನೈರ್ಮಲ್ಯ ನಿರ್ವಹಿಸುವುದು ಅಗತ್ಯ. ನಿಯತವಾಗಿ ಸೋಪ್‍ವಾಟರ್‍ ನಲ್ಲಿ ಕೈತೊಳೆಯುತ್ತಿರಬೇಕು. ಅದರಲ್ಲೂ ಮುಖ್ಯವಾಗಿ ಊಟಕ್ಕೆ ಮುನ್ನ ಕೈ ತೊಳೆಯುವುದು ಅಪಾಯಕಾರಿ ವೈರಸ್‍ಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡಲು ಹೆಚ್ಚು ಸಹಕಾರಿ. ಇಂಥ ವೈರಸ್ ಅಥವಾ ಬ್ಯಾಕ್ಟೀರಿಯಾಗಳು ಇರುವಾಗ ಮುಖ ಒರೆಸಿಕೊಂಡರು ಕೂಡಾ ನಿಮ್ಮ ಕಣ್ಣು, ಮೂಗು ಬಾಯಿಯ ಮೂಲಕ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

3. ಸಾಕಷ್ಟು ನಿದ್ದೆ ಹಾಗೂ ಒತ್ತಡ ನಿರ್ವಹಣೆಯೂ ಮುಖ್ಯ

ರಾತ್ರಿಯ ವೇಳೆ ಏಳೆಂಟು ಗಂಟೆ ಸುಖನಿದ್ರೆ ಮಳೆಗಾಲದಲ್ಲಿ ಅಗತ್ಯ. ನಿದ್ರಾಹೀನತೆ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ ಹಾಗೂ ರೋಗಕಾರಕ ಅಂಶಗಳು ಹೆಚ್ಚಲು ಕಾರಣವಾಗುತ್ತದೆ. ಅಂತೆಯೇ ಅಧಿಕ ಒತ್ತಡ ಕೂಡಾ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಮಾರಕ. ಉದ್ವಿಗ್ನತೆ ಕಡಿಮೆ ಮಾಡಿಕೊಂಡು ಧ್ಯಾನ, ಸುಧೀರ್ಘ ಉಸಿರಾಟದ ಅಭ್ಯಾಸ ಅಥವಾ ಯೋಗದ ಮೂಲಕ ಇದನ್ನು ನಿಭಾಯಿಸಬಹುದಾಗಿದೆ.

4. ನಿಯತ ದೈಹಿಕ ವ್ಯಾಯಾಮ ಕೂಡಾ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಪೂರಕ.

ಕೃಪೆ: hindustantimes.com

Leave A Reply

Your email address will not be published.