EBM News Kannada
Leading News Portal in Kannada

Nagasaki Day 2023: ಜಪಾನ್‌ನ ನಾಗಾಸಾಕಿ ಮೇಲೆ ಪರಮಾಣು ದಾಳಿಗೆ 78 ವರ್ಷಗಳು – Kannada News | Nagasaki Day 2023: Japan’s Nagasaki on Wednesday marked the 78th anniversary of the US atomic bombing

0


ಶಾಂತಿಯನ್ನು ಉತ್ತೇಜಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯ ಬಗ್ಗೆ ಜಾಗೃತಿ ಮೂಡಿಸಲು ನಾಗಾಸಾಕಿ ದಿನವನ್ನು ಇಂದು(ಆಗಸ್ಟ್ 9) ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

Nagasaki Day 2023

Image Credit source: pixabay

ಆಗಸ್ಟ್ 9, 1945 ರಂದು ಜಪಾನ್‌ನ ನಾಗಾಸಾಕಿ ಮತ್ತು ಹಿರೋಷಿಮಾ ನಗರಗಳು ಬಾಂಬ್​​​​ ದಾಳಿಗೆ ಸಾಕ್ಷಿಯಾಗಿ 78ವರ್ಷಗಳು ಕಳೆದಿದೆ. ಈ ವಿಧ್ವಂಸಕ ದಾಳಿಯಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದು, ಈ ದಿನ ಶಾಂತಿಯನ್ನು ಉತ್ತೇಜಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯ ಬಗ್ಗೆ ಜಾಗೃತಿ ಮೂಡಿಸಲು ನಾಗಾಸಾಕಿ ದಿನವನ್ನು ಇಂದು(ಆಗಸ್ಟ್ 9) ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಸಂತ್ರಸ್ತರಿಗೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸಂತಾಪ ಸೂಚಿಸಿದ್ದು, ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಕಾರಗೊಳಿಸಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಜೊತೆಗೆ 78 ವರ್ಷಗಳ ಹಿಂದೆ ನಾಗಾಸಾಕಿಯಲ್ಲಿ ಸಂಭವಿಸಿದ ದುರಂತವು ಎಂದಿಗೂ ಮರುಕಳಿಸಬಾರದು. ಪರಮಾಣು ಬಾಂಬ್ ದಾಳಿಗೆ ಒಳಗಾದ ಏಕೈಕ ದೇಶ ಜಪಾನ್​​​​, ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಕಾರಗೊಳಿಸುವ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸುತ್ತೇವೆ ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಎರಡನೆಯ ಮಹಾಯುದ್ಧವು ಉಲ್ಬಣಗೊಳ್ಳುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ತನ್ನ ಮಿತ್ರರಾಷ್ಟ್ರಗಳೊಂದಿಗೆ ಜಪಾನಿನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸಲು ಪ್ರಯತ್ನಿಸಿತು. ಪರಮಾಣು ಬಾಂಬ್‌ಗಳನ್ನು ಬಳಸುವ ನಿರ್ಧಾರವು ಜಪಾನ್‌ನ ಶರಣಾಗತಿಯನ್ನು ತ್ವರಿತಗೊಳಿಸುವ ಮತ್ತು ಸುದೀರ್ಘವಾದ, ದುಬಾರಿ ಆಕ್ರಮಣವನ್ನು ತಪ್ಪಿಸುವ ನಡೆಸಲ್ಪಟ್ಟವು. ಜುಲೈ 16, 1945 ರಂದು ಯುನೈಟೆಡ್ ಸ್ಟೇಟ್ಸ್ ಪರಮಾಣು ಶಕ್ತಿಯನ್ನು ಬಳಸಿಕೊಂಡ ಸುಮಾರು 20 ದಿನಗಳ ನಂತರ, ‘ಟ್ರಿನಿಟಿ ಟೆಸ್ಟ್’ ನಂತರ, ಆಗಸ್ಟ್ 6 ರಂದು ಹಿರೋಷಿಮಾದ ಮೇಲೆ ಮೊದಲ ಪರಮಾಣು ಬಾಂಬ್ ಅನ್ನು ಸ್ಪೋಟಗೊಳಿಸಿತು. ಈ ವಿಧ್ವಂಸಕ ದಾಳಿ 1,40,000 ಜನರನ್ನು ಬಲಿಪಡೆದುಕೊಂಡಿದೆ.

ನಾಗಸಾಕಿಯ ಮೇಲೆ ಎಸೆದ ಬಾಂಬ್‌ಗೆ 80,000 ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದ್ದು, ಇದು ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಗತಿಗೆ ಕಾರಣವಾಯಿತು. ನಾಗಾಸಾಕಿಯಲ್ಲಿನ ಆರಂಭಿಕ ಸ್ಫೋಟದಲ್ಲಿ ಕನಿಷ್ಠ 70,000 ಜನರು ಸಾವನ್ನಪ್ಪಿದ್ದರೆ, ನಂತರ ಸುಮಾರು 70,000 ಜನರು ವಿಕಿರಣ-ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದರು. ಶಾಂತಿಯನ್ನು ಉತ್ತೇಜಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯ ಬಗ್ಗೆ ಜಾಗೃತಿ ಮೂಡಿಸಲು ನಾಗಾಸಾಕಿ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On – 12:44 pm, Wed, 9 August 23

ತಾಜಾ ಸುದ್ದಿ

Leave A Reply

Your email address will not be published.