Quit India Movement Day 2023: ಇಂದು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ ದಿನ – Kannada News | Quit India Movement Day 2023; History, Significance and Importance of Celebration; details in Kannada
1947 ಆಗಸ್ಟ್ 15ರಂದು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ತು. ಆದ್ರೆ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ್ದೇ ಈ ಕ್ವಿಟ್ ಇಂಡಿಯಾ ಚಳವಳಿ. ಇನ್ನು ಈ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದ್ಯಾರು?ಇಲ್ಲಿದೆ ನೋಡಿ ಕುತೂಹಲಕಾರಿ ಸಂಗತಿಗಳು.

ಸಾಂದರ್ಭಿಕ ಚಿತ್ರ
ಭಾರತದ(India) ಇತಿಹಾಸದಲ್ಲಿಯೇ ಆಗಸ್ಟ್ ತಿಂಗಳು ಹಲವು ಮೈಲುಗಲ್ಲಿಗೆ ನಾಂದಿ ಹಾಡಿದ ವಿಶೇಷ ತಿಂಗಳಾಗಿದೆ. ಆಗಸ್ಟ್ 15 ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ತು. ಅದಕ್ಕೂ ಮೊದಲು ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಆಗಸ್ಟ್ 8,1942ರಲ್ಲಿ ಮಹಾತ್ಮ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿಯನ್ನು(Quit India Movement Day) ಆರಂಭಿಸಿದ್ದರು. ಇದರೊಂದಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಈ ಚಳವಳಿಯನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದೆ ಎಂದು ಹೇಳಲಾಗುತ್ತದೆ.
ಭಾರತ ಬಿಟ್ಟು ತೊಲಗಿ ಚಳವಳಿಯು ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆಯಿತು. ಆಗಸ್ಟ್ 8 ರಂದು ಮಹಾತ್ಮ ಗಾಂಧಿ ಅವರು ಈ ಚಳವಳಿಯನ್ನು ಮುಂಬೈನಲ್ಲಿ ತಮ್ಮ 50 ಜನ ಬೆಂಬಲಿಗರೊಂದಿಗೆ ಆರಂಭಿಸಿದ್ದರು. ಇದರಿಂದ ಈ ದಿನದಂದು ಭಾರತವನ್ನು ಬಿಟ್ಟು ತೊಲಗಿ ಎಂದು ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟ ದಿನವಾಗಿದೆ. ಆಗಸ್ಟ್ 8, 1942ರಲ್ಲಿ ಮುಂಬೈನ ಗೊವಾಳಿಯ ಮೈದಾನ(ಇಂದಿನ ಹೆಸರು- ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರು ‘ಮಾಡು ಇಲ್ಲವೆ ಮಡಿ’ ಘೋಷಣೆಯೊಂದಿಗೆ ಈ ಚಳವಳಿ ನಡೆಸುವುದಾಗಿ ಘೋಷಿಸಿದ್ದರು, ಅದು ಮರು ದಿನ ಅಂದರೆ ಆಗಸ್ಟ್ 9 ರಿಂದ ಚಳವಳಿ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರ ಅವರು ಘೋಷಿಸಿದ್ದ ಚಳವಳಿ ದೇಶಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಈ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಬ್ರಿಟಿಷರು ಗಾಂಧೀಜಿಯವರನ್ನು ಬಂಧಿಸಿ ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು.
ಗಾಂಧೀಜಿ ಬಂಧನದ ನಂತರ ಜೆ.ಪಿ. ನಾರಾಯಣ್, ಲೋಹಿಯಾ, ಅರುಣಾ ಆಸಿಫ್ ಅಲಿ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಬ್ರಿಟಿಷರ ನಿದ್ದೆಗೆಡಿಸಿತ್ತು. ಅಂತಿಮವಾಗಿ ಪ್ರಮುಖ ನಾಯಕರನ್ನು ಜೈಲಿಗಟ್ಟಿದರೆ ಈ ಚಳಿವಳಿ ನಿಂತೇ ಹೋಗುತ್ತೆ ಎಂದು ತೀರ್ಮಾನಕ್ಕೆ ಬಂದ ಬ್ರಿಟಿಷರು, ಚಳವಳಿಯ ಪ್ರಮುಖರನ್ನು ಬಂಧಿಸಿದ್ದರು. ಆದರೂ ನಾಯಕರಿಲ್ಲದೆಯೇ ಈ ಚಳವಳಿ ಉಗ್ರ ಸ್ವರೂಪವನ್ನು ಕಂಡಿದ್ದು ವಿಶೇಷ. ಇದರಿಂದ ಆಗಸ್ಟ್ 8 ನಾವು ಎಂದು ಮರೆಯಲಾಗದ ಕ್ರಾಂತಿಯ ದಿನವಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On – 7:19 am, Tue, 8 August 23