Ultimate magazine theme for WordPress.

Laxmmi Bomb OTT Release: ನೂರು ಕೋಟಿಗೆ ಲಕ್ಷ್ಮಿ ಬಾಂಬ್, 30 ಕೋಟಿಗೆ ನಿಶ್ಯಬ್ಧಂ ಸೇಲ್​…!

0

ಲಾಕ್​ಡೌನ್​ನಿಂದಾಗಿ ಚಿತ್ರಮಂದಿರಗಳು ಹಾಗೂ ಮಲ್ಪಿಪ್ಲೆಕ್ಸ್​ಗಳು ಬಂದ್​ ಆಗಿವೆ. ಸದ್ಯಕ್ಕೆ ಹತ್ತಿರದಲ್ಲಿ ಅವುಗಳನ್ನು ತೆರೆಯುವ ಸೂಚನೆಯೇ ಕಾಣುತ್ತಿಲ್ಲ. ಇದರಿಂದಾಗಿ ರಿಲೀಸ್​ಗೆ ಕಾದಿರುವ ಸಿನಿಮಾಗಳೂ ಬಿಡುಗಡೆ ಭಾಗ್ಯವಿಲ್ಲದೆ ಹಾಗೇ ಇವೆ. ಇದರಿಂದಾಗಿ ಇಂತಹ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಿನಿ ಕಾರ್ಮಿಕರು ಹಾಗೂ ನಿರ್ಮಾಪಕರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ಸಿನಿ ಕಾರ್ಮಿಕರು ಹಾಗೂ ಕಷ್ಟದಲ್ಲಿರುವ ನಿರ್ಮಾಪಕರಿಗಾಗಿ ಕೆಲವು ಸಿನಿಮಾಗಳನ್ನು ಓಟಿಟಿ ಮೂಲಕ ಬಿಡುಗಡೆ ಮಾಡಲು ಚಿತ್ರತಂಡಗಳು ಯೋಚಿಸುತ್ತಿದೆ. ಅದರಲ್ಲೂ ಟಾಲಿವುಡ್​ನಲ್ಲಿ ಹಲವಾರು ಸಿನಿಮಾಗಳು ಓಟಿಟಿ ಮೂಲಕ ರಿಲೀಸ್​ ಆಗಲು ತಯಾರಿ ನಡೆಸಿವೆಯಂತೆ. ಅಂದರೆ ಥಿಯೇಟರ್ ಬದಲು ಇಂಟರ್ನೆಟ್​ನಲ್ಲೇ ಈ ಸಿನಿಮಾಗಳನ್ನ ವೀಕ್ಷಿಸಬಹುದು.

ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮಿಬಾಂಬ್​ ನೂರು ಕೋಟಿ ಹಾಗೂ ಅನುಷ್ಕಾ ಶೆಟ್ಟಿ ನಟನೆಯ ನಿಶ್ಯಬ್ಧಂ ಸಿನಿಮಾ 30 ಕೋಟಿಗೆ ಮಾರಾಟವಾಗಲಿದೆಯಂತೆ. ಈ ಬಗ್ಗೆ ಚಿತ್ರತಂಡಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಆದಷ್ಟು ಬೇಗ ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಸಿನಿಮಾಗಳು ತೆರೆ ಕಾಣಲಿವೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Leave A Reply

Your email address will not be published.