ಕೊರೋನಾ ಲಾಕ್ಡೌನ್ ವಿಸ್ತರಿಸುತ್ತಿದ್ದಂತೆಯೇ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸಕ್ರಿಯವಾಗಿದ್ದಾರೆ. ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದ ಮೂಲಕವೇ ರಂಜಿಸುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇನ್ನು ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ಸಹ ಅಭಿಮಾನಿಗಳಿಗಾಗಿ ಈಗ ವಿಡಿಯೋ ಸಿರೀಸ್ ಅನ್ನೇ ಆರಂಭಿಸಿದ್ದಾರೆ.
ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ತಮ್ಮ ನೆನಪಿನ ಬುತ್ತಿಯಿಂದ ಒಂದೊಂದೇ ವಿಡಿಯೋಗಳನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದೂ ಸಹ ಅವರು ನಟಿಸಿರುವ ‘ಹೆಬ್ಬುಲಿ’ ಚಿತ್ರದ ಚಿತ್ರೀಕರಣದ ವೇಲೆ ಮಾಡಿರುವ ವಿಡಿಯೋಗಳು.
ಇತ್ತೀಚೆಗಷ್ಟೆ ಶ್ರೀನಗರದ ಸೌಂದರ್ಯವನ್ನು ವರ್ಣಿಸುತ್ತಾ…. ಭೂಮಿ ಮೇಲಿನ ಸ್ವರ್ಗವಾಗಿದ್ದ ಈ ನೆಲ ಈಗ ದುಸ್ವಪ್ನಗಳ ನೆಲವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ ಒಂದು ವಿಡಿಯೋ ಹಂಚಿಕೊಂಡಿದ್ದರು. ಅಲ್ಲದೆ ಮೊನ್ನೆಯಷ್ಟೆ ಶ್ರೀನಗರಲ್ಲಿ ಚಿತ್ರೀಕರಣದಿಂದ ಬ್ರೇಕ್ ಪಡೆದು ಕ್ರಿಕೆಟ್ ಆಡಿದ್ದ ವಿಡಿಯೋ ಪೋಸ್ಟ್ ಮಾಡಿದ್ದರು.