COVID-19 : ಕಲಬುರ್ಗಿಯಲ್ಲಿ 80 ವರ್ಷದ ವೃದ್ಧ ಸಾವು; ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆ
ಬೆಂಗಳೂರು(ಏ. 21): ಕಲಬುರ್ಗಿಯಲ್ಲಿ ಮೊನ್ನೆ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷ ವ್ಯಕ್ತಿಯೊಬ್ಬರು ಇಂದು ಮೃತಪಟ್ಟಿದ್ದಾರೆ. ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಕಾಯಿಲೆಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಇವತ್ತು ಇವರದ್ದೂ ಸೇರಿ ಏಳು ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 415ಕ್ಕೆ ಏರಿದೆ.
ಮೃತಪಟ್ಟ ಕಲಬುರ್ಗಿಯ ಈ ವ್ಯಕ್ತಿ ಕಳೆದ 4 ವರ್ಷದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಮೂರು ವರ್ಷಗಳಿಂದಲೂ ಇವರು ಹಾಸಿಗೆ ಹಿಡಿದಿದ್ದರು. ಮೊನ್ನೆ (ಏ. 19) ಇವರು SARI (ತೀವ್ರ ಉಸಿರಾಟ ತೊಂದರೆ) ಕಾಯಿಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು. ಇವತ್ತು ಕೊನೆಯುಸಿರೆಳೆದಿದ್ದಾರೆ.
ಇವತ್ತು ಬೆಳಕಿಗೆ ಬಂದ 7 ಕೊರೋನಾ ಪ್ರಕರಣಗಳ ಪೈಕಿ ವಿಜಯಪುರ ಮತ್ತು ಕಲಬುರ್ಗಿಯಲ್ಲಿ ತಲಾ ಮೂರು ಪ್ರಕರಣಗಳಿವೆ. ದಕ್ಷಿಣ ಕನ್ನಡದ ಬಂಟ್ವಾಳ ಒಂದು ಪ್ರಕರಣ ಇದೆ. ಈ ಏಳು ಮಂದಿ ಸೋಂಕಿತರಲ್ಲಿ ಮೂವರು ಮಾತ್ರ 60 ವರ್ಷ ಮೇಲ್ಪಟ್ಟಿನ ವಯಸ್ಸಿನವರಾಗಿದ್ದಾರೆ. ಉಳಿದ ನಾಲ್ವರು 30 ವರ್ಷದೊಳಗಿನವರೇ ಆಗಿದ್ದಾರೆ.
ಇದನ್ನೂ ಓದಿ: ಹೋಮ್ ಡೆಲಿವರಿ ಯೋಜನೆಗೆ ಬಿಎಸ್‌ವೈ ಚಾಲನೆ; ಇನ್ನೂ ಮನೆ ಬಾಗಿಲಿಗೆ ತಲುಪಲಿವೆ ಅಗತ್ಯ ವಸ್ತುಗಳು
ಬಂಟ್ವಾಳದಲ್ಲಿ 67 ವರ್ಷದ ವೃದ್ಧೆಗೆ ಕೊರೋನಾ ಸೋಂಕು ತಗುಲಿದೆ. ಭಾನುವಾರ ಮೃತಪಟ್ಟಿದ್ದ 42 ವರ್ಷದ ಮಹಿಳೆಯ ಸಂಪರ್ಕದಿಂದ ಈ ವೃದ್ಧೆಗೆ ಸೋಂಕು ತಗುಲಿದೆ. ಇಬ್ಬರು ಅಕ್ಕಪಕ್ಕದ ಮನೆಯವರೇ ಆಗಿದ್ದರು. ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದಂತಾಗಿದೆ.
ಜಿಲ್ಲಾವಾರು ಸೋಂಕಿತರ ಪಟ್ಟಿ:
ಬೆಂಗಳೂರು ನಗರ: 89ಮೈಸೂರು: 84
ಬೆಳಗಾವಿ: 42
ವಿಜಯಪುರ: 35
ಕಲಬುರ್ಗಿ: 30
ಬಾಗಲಕೋಟೆ: 21
ಚಿಕ್ಕಬಳ್ಳಾಪುರ: 16
ದಕ್ಷಿಣ ಕನ್ನಡ: 15
ಬೀದರ್: 15
ಬಳ್ಳಾರಿ 13
ಬೆಂಗಳೂರು ಗ್ರಾಮಾಂತರ: 12
ಮಂಡ್ಯ: 12
ಉತ್ತರ ಕನ್ನಡ: 11
ಧಾರವಾಡ: 7
ಗದಗ: 4
ಉಡುಪಿ: 3
ತುಮಕೂರು: 2
ದಾವಣಗೆರೆ: 2
ಚಿತ್ರದುರ್ಗ: 1
ಕೊಡಗು: 1