EBM News Kannada
Leading News Portal in Kannada

ಕಲಬುರ್ಗಿಯಲ್ಲಿಂದು 5 ಹೊಸ ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆ

0

ಬೆಂಗಳೂರು (ಏ. 20): ಕಳೆದ 2-3 ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಈಗಾಗಲೇ 16 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, 395 ಜನರಿಗೆ ಸೋಂಕು ತಗುಲಿದೆ. ನಿನ್ನೆ ಸಂಜೆಯಿಂದ ಇಂದಿನವರೆಗೆ ಹೊಸದಾಗಿ ಐವರಿಗೆ ಕೊರೋನಾ ಸೋಂಕು ತಗುಲಿದೆ.

ರಾಜ್ಯದಲ್ಲಿ ಇದುವರೆಗೂ 395 ಜನರಿಗೆ ಕೊರೋನಾ ಸೋಂಕು ತಗುಲಿದೆ. ಅವರಲ್ಲಿ 111 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದೀಗ ಹೊಸದಾಗಿ 5 ಜನರಿಗೆ ಸೋಂಕು ಪತ್ತೆಯಾಗಿದ್ದು, ಐವರು ಕೂಡ ಕಲಬುರ್ಗಿಯವರಾಗಿದ್ದಾರೆ. ಇವರೆಲ್ಲರನ್ನೂ ಕಲಬುರ್ಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ನಿನ್ನೆ ಸಂಜೆಯವರೆಗೆ ರಾಜ್ಯದಲ್ಲಿ 6 ಜನರಿಗೆ ಸೋಂಕು ಪತ್ತೆಯಾಗಿತ್ತು. ನಿನ್ನೆ ಪತ್ತೆಯಾದ ಸೋಂಕಿತರಲ್ಲಿ ನಾಲ್ವರು ಮೈಸೂರಿನವರು ಮತ್ತು ಇಬ್ಬರು ದಕ್ಷಿಣ ಕನ್ನಡದ ಉಪ್ಪಿನಂಗಡಿಯವರಾಗಿದ್ದಾರೆ.

Leave A Reply

Your email address will not be published.