EBM News Kannada
Leading News Portal in Kannada

ಇಂದು ರಾಜ್ಯದಲ್ಲಿ 10ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ; 207ಕ್ಕೇರಿದ ಸೋಂಕಿತರ ಸಂಖ್ಯೆ

0

ಬೆಂಗಳೂರು(ಏ.10): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ರಾಜ್ಯದಲ್ಲಿ 10ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಇಂದು ಕೊರೋನಾ ಪಾಸಿಟಿವ್​ ಕಂಡು ಬಂದ 10 ಮಂದಿಯನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಈವರೆಗೆ ಕರ್ನಾಟಕದಲ್ಲಿ 6 ಜನ ಕೊರೋನಾಗೆ ಬಲಿಯಾಗಿದ್ದಾರೆ. 30 ಮಂದಿ ಕೊರೋನಾದಿಂದ ಗುಣಮಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 4 ಪ್ರಕರಣಗಳು, ಮೈಸೂರಿನಲ್ಲಿ 5 ಪ್ರಕರಣಗಳು ಹಾಗೂ ಕಲಬುರಗಿಯಲ್ಲಿ ಒಂದು ಕೊರೋನಾ ವೈರಸ್​ ಪ್ರಕರಣ ಪತ್ತೆಯಾಗಿದೆ. ಇಂದು ಮೈಸೂರಿನಲ್ಲಿ 8 ವರ್ಷದ ಬಾಲಕನಿಗೆ ಮತ್ತು ಬೆಂಗಳೂರಿನಲ್ಲಿ 11 ವರ್ಷದ ಬಾಲಕಿಗೆ ಕೊರೋನಾ ಸೋಂಕು ತಗುಲಿದೆ. 10 ಮಂದಿ ಸೋಂಕಿತರಲ್ಲಿ 4 ಜನ ಮಹಿಳೆಯರಿಗೆ ಮತ್ತು 6 ಮಂದಿ ಪುರುಷರಿಗೆ ಸೋಂಕು ಹರಡಿದೆ.

Leave A Reply

Your email address will not be published.