ಅಪ್ಪ-ಮಗನ ಮಲತಾಯಿ ಧೋರಣೆ: ಮಂಡ್ಯ-ಮೈಸೂರಿನಲ್ಲಿ ‘ಒಡೆದಮನೆ’ ಯಾಗಿದೆ ಜೆಡಿಎಸ್!
ಮೈಸೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಮೂರು ವಾರಗಳು ಕಳೆದಿವೆ, ಇದೇ ವೇಳೆ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಒಡೆದ ಮನೆಯಂತಾಗಿದೆ.
ಕುಮಾರ ಸ್ವಾಮಿ 2 ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದಕ್ಕೆ ಹಳೇ ಮೈಸೂರು ಭಾಗದ ಜನ ಸಂತೋಷಗೊಂಡಿದ್ದಾರೆ, ಆದರೆ ಜೆಡಿಎಸ್ ಗೆ ಅಧಿಕಾರ ಸಿಕ್ಕಿರುವುದು ಪಕ್ಷದ ಬಹಳ ಮಂದಿಯಲ್ಲಿ ಅಸಮಾಧಾನ ಗೊಂಡಿದ್ದಾರೆ.
ಹಿರಿಯ ಮುಖಂಡರಾದ ಸಿ,ಎಸ್ ಪುಟ್ಟರಾಜು ಮತ್ತು ಜಿ,ಟಿ ದೇವೇಗೌಡ ಅವರನ್ನು ಅಪ್ಪ-ಮಗ ನಡೆಸಿಕೊಳ್ಳುತ್ತಿರುವ ರೀತಿಗೆ ಪಕ್ಷದೊಳಗೆ ತೀವ್ರ ಆಕ್ರೋಶ ವ್ಯಕ್ತ ವಾಗಿದೆ,
ಮಂಡ್ಯ ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪುಟ್ಟರಾಜು ಅವರಿಗೆ ಯಾವುದಾದರೂ ಮಹತ್ವದ ಖಾತೆ ಸಿಗಲಿದೆ ಎಂದು ಬೆಂಬಲಿಗರು ಅಪೇಕ್ಷಿಸಿದ್ದರು. ಆದರೆ ಪ್ರಮುಖ ಖಾತೆ ಸಿಗದ ಕಾರಣ ಕಾರ್ಯಕರ್ತರ ಆಚರಣೆ ಮೂಡ್ ನಾಪತ್ತೆಯಾಗಿದೆ, ಜೊತೆಗೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿ.ಟಿ ದೇವೇಗೌಡ ಅವರಿಗೆ ಯಾವುದಾದರೂ ಮಹತ್ವದ ಖಾತೆ ದೊರೆಯಲಿದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ.
ತಮ್ಮ ಸಂಬಂಧಿಗೆ ಮಹತ್ವದ ಖಾತೆ ಕೊಡುವ ಸಲುವಾಗಿ ಮಾಜಿ ಪ್ರದಾನಿ ದೇವೇಗೌಡ ಪುಟ್ಟರಾಜು ಮತ್ತು ಜಿ,ಟಿಡಿ ಅವರನ್ನು ಕಡೆಗಣಿಸುತ್ತಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ಶ್ರೀರಂಗಪಟ್ಟಣ, ಕೆ.ಆರ್ ಪೇಟೆ, ಮಂಡ್ಯ ಹಾಗೂ ನಾಗಮಂಗಲ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಲು ಪುಟ್ಟರಾಜು ಪ್ರಮುಖ ಪಾತ್ರ ವಹಿಸಿದ್ದರು. ಈ ಕ್ಷೇತ್ರಗಳಲ್ಲಿ ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದರು. ಈ ಬೆಳವಣಿಗೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಪಕ್ಷದೊಳಗಿನ ಈ ಬೆಳವಣಿಗೆ ಬಗ್ಗೆ ಹಲವು ನಾಯಕರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹಿರಿಯ ನಾಯಕರನ್ನು ಅಪ್ಪ-ಮಗ ನಡೆಸಿಕೊಳ್ಳುತ್ತಿರುವ ರೀತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಎದೆಯೊಳಗೆ ಅತೀವ ಕಿಚ್ಚು ಇದ್ದರೂ ಪುಟ್ಟರಾಜು ಸಣ್ಣ ನೀರಾವರಿ ಇಲಾಖೆಯಲ್ಲಿ ಮುಂದುವರಿಯಲು ಸಮ್ಮತಿಸಿದ್ದಾರೆ, ಆದರೆ ಅವರ ಬೆಂಬಲಿಗರು ಕುಮಾರ ಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.
ಸಣ್ಣ ನೀರಾವರಿ ಖಾತೆ ಬಹಳ ಮಹತ್ವದ್ದು ಎಂದಾಗಿದ್ದರೇ ಕುಮಾರ ಸ್ವಾಮಿ ಅದನ್ನು ತಮ್ಮ ಸಹೋದರನಿಗೆ ನೀಡಬೇಕಿತ್ತು ಎಂದು ಜೆಡಿಎಸ್ ಕಾರ್ಯಕರ್ತ ಸೋಮಶೇಖರ್ ಎಂಬುವರು ಪ್ರಶ್ನಿಸಿದ್ದಾರೆ. ದುದ್ದ ಗ್ರಾಮದಲ್ಲಿ ದೇವೇಗೌಡರು ಚುನಾವಣಾ ಪ್ರಚಾರ ಮಾಡುವಾಗ ಪುಟ್ಟರಾಜು ಅವರನ್ನು ಮಂತ್ರಿಯನ್ನಾಗಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಸುವುದಾಗಿ ಘೋಷಿಸಿದ್ದರು ಎಂದು ತಿಳಿಸಿದ್ದಾರೆ.
ದುರಾದೃಷ್ಟ ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ನೀಡಲಾಗಿದೆ, ಆದರೆ ದೇವೇಗೌಡರ ಪುತ್ರ ರಮೇಶ್ ಮಾವ ಡಿ,ಸಿ ತಮ್ಮಣ್ಣ ಅವರಿಗೆ ಸಾರಿಗೆ ಇಲಾಖೆ ನೀಡಲಾಗಿದೆ, ಜೊತೆಗೆ ಅವರಿಗೆ ಜಿಲ್ಲಾ ಉಸ್ತುವಾರಿ ಕೂಡ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಇದರಿಂದ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದ ಹಾಗಾಗಿದೆ.
ದೇವೇಗೌಡ ಮತ್ತು ಕುಮಾರ ಸ್ವಾಮಿ ದ್ರೋಹಿಗಳು ಎಂಬ ಬಿಜೆಪಿ ಆರೋಪ ಸತ್ಯ ಎಂದು ಜೆಡಿಎಲ್ ಹಿರಿಯ ಮುಖಂಡ ಶಿವಳ್ಳಿ ಮಲ್ಲೇಗೌಡ ಹೇಳಿದ್ದಾರೆ, ಪುಟ್ಟರಾಜು ಅವರ ಸೇವೆಯನ್ನು ಪರಿಗಣಿಸಿ, ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕಿತ್ತು. ಡಿ.ಸಿ ತಮ್ಮಣ್ಣ ಅವರು ಸಚಿವರಾಗಿದ್ದಕ್ಕೆ ನಮಗೆ ಆಕ್ಷೇಪವಿಲ್ಲ, ಆದರೆ ಪಕ್ಷ ಬಲವರ್ದನೆಗೆ ಶ್ರಮಿಸಿದ ಪುಟ್ಟರಾಜು ಅವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಜಿಟಿ ದೇವೇಗೌಡ ಉನ್ನತ ಶಿಕ್ಷಣ ಇಲಾಖೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ, ಅವರಿಗೆ ಸಹಕಾರ ಮತ್ತು ಎಪಿಎಂಸಿ ನೀಡುವ ಭರವಸೆ ಕೊಡಲಾಗಿತ್ತು, ಆಧರೆ ಅವರಿಗೆ ಯಾವುದೇ ಖಾತೆ ನೀಡದರೇ ಸಚಿವರಾಗಿ ಮುಂದುವರಿಸಲಾಗುತ್ತಿದೆ. ಜಿ.ಟಿ ದೇವೇಗೌಡ, ಹುಣಸೂರಿನಿಂದ ಪ್ರಜ್ವಲ್ ರಾಜಕೀಯ ಪ್ರವೇಶಿಸುವುದನ್ನು ನಿಲ್ಲಿಸಿ, ಆ ಕ್ಷೇತ್ರದಿಂದ ಎ ಎಚ್ ವಿಶ್ವನಾಥ್ ಅವರನ್ನು ಗೆಲ್ಲಿಸುವ ಮೂಲಕ ರೇವಣ್ಣ ಅವರ ನಾಯಕತ್ವವನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ,
ಚಾಮುಂಡೇಶ್ವರಿಯಿಂದ ಕುಮಾರ ಪರ್ವ ಆರಂಭಿಸಿದ್ದ ಕುಮಾರ ಸ್ವಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದರೇ, ಜಿ.ಟಿ ದೇವೇಗೌಡ ಅವರಿಗೆ ಉನ್ನತ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ದೊರಾ ಮಂಜುನಾಥ್ ತಿಳಿಸಿದ್ದಾರೆ.