ಮಂಗಳೂರು: ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್.ವಿ. ದೇಶಪಾಂಡೆ ಭೇಟಿ
ಮಂಗಳೂರು: ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮಳೆ, ನೆರೆಯಿಂಡಾಗಿ ಹಾನಿಗೊಂಡ ಪ್ರದೇಶಕ್ಕೆ ರಾಜ್ಯ ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗುರುವಾರ ಮಳೆ ಸಂತ್ರಸ್ತ ಪ್ರದೇಶಕ್ಕೆ ಭೇಟಿ ಕೊಟ್ಟ ಸಚಿವರು ರಾಜ್ಯದಲ್ಲಿ ಮಳೆ ಹಾನಿ ಪ್ರದೇಶಗಳಿಗೆ 22 ಕೋಟಿ ರೂ. ಪರಿಹಾರ ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಉಂಟಾಗುವ ಮಳೆ ಹಾನಿ ಪ್ರಮಾಣ ತಗ್ಗಿಸಬೇಕು, ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಕಮಿಷನರ್ ಕಛೇರಿಯಲ್ಲಿ ಸಭೆ ನಡೆಸಿದ್ದ ಸಚಿವರು ಬಳಿಕ ಮಾದ್ಯಮಗಳೊಡನೆ ಮಾತನಾಡಿದ್ದಾರೆ. ಮಳೆ ಹಾನಿ ತುರ್ತು ಪರಿಹಾರಕ್ಕಾಗಿ 5 ಕೋಟಿ ರೂ. ಮೀಸಲಿರಿಸಿಕೊಳ್ಳಬೇಕೆಂದು ಎಲ್ಲಾ ಉಪ ಆಯುಕ್ತರಿಗೆ ಸೂಚನೆ ನಿಡಿದ್ದಾಗಿ ದೇಶಪಾಡೆ ಹೇಳಿದ್ದಾರೆ.
ಕೇಂದ್ರದ ಮಾರ್ಗದರ್ಶಿ ಸೂತ್ರಗಳ ಆಧಾರದಂತೆ ರಾಜ್ಯದ ಮಳೆ ಹಾನಿ ಪರಿಹಾರ ಕ್ರಮವನ್ನು ನಾವು ನಿರ್ಣಯಿಸುತ್ತೇವೆ ಎಂದ ಸಚಿವರು ಬೆಂಗಳೂರು ಹೊರತು ರಾಜ್ಯದೆಲ್ಲೆಡೆ ಈ ಬಾರಿ ಸಾಮಾನ್ಯ ನಿರೀಕ್ಷೆಯ ಮಟ್ಟದಲ್ಲಿ ಮಳೆಯಾಗಿದೆ ಎಂದಿಅರು.
ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಮಳೆಯಿಂದಾಗಿ ಮೃತಪಟ್ಟ ಸಂತ್ರಸ್ತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ಅನುದಾನ ಸೇರಿದಂತೆ 5 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಸಚಿವರು ನುಡಿದರು.