EBM News Kannada
Leading News Portal in Kannada

116 ದಿನಗಳ ಜೈಲುವಾಸ ಅಂತ್ಯ: ಮೊಹಮದ್ ನಲಪಾಡ್ ಗೆ ಜಾಮೀನು ಮಂಜೂರು

0

ಬೆಂಗಳೂರು: ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

2 ಲಕ್ಷ ಬಾಂಡ್ ಇಬ್ಬರ ಶ್ಯೂರಿಟಿ ಪಡೆದು ಸಾಕ್ಷ್ಯಾಧಾರ ನಾಶ ಮಾಡದಂತೆ ಹೈಕೋರ್ಟ್ ಷರತ್ತು ವಿಧಿಸಿದೆ. ಜೊತೆಗೆ ಬೆಂಗಳೂರು ಬಿಟ್ಟು ಎಲ್ಲಿಯೂ ತೆರಳದಂತೆ ಸೂಚಿಸಿದೆ. ಇದರಿಂದ ನಲಪಾಡ್ ನ 116 ದಿನಗಳ ಜೈಲುವಾಸ ಅಂತ್ಯವಾಗಿದೆ.

ನಲಪಾಡ್ ಪರ ವಕೀಲ ಬಿ.ವಿ ಆಚಾರ್ಯ ವಾದ ಮಂಡಿಸಿದ್ದರು. ಮಲ್ಯ ರಸ್ತೆಯಲ್ಲಿರುವ ಫರ್ಜಿ ಕೆಫೆಯಲ್ಲಿ ಉದ್ಯಮಿ ಲೋಗನಾಥನ್ ಅವರ ಪುತ್ರ ವಿದ್ವತ್ ಮೇಲೆ ನಲಪಾಡ್ ಮತ್ತವನ ಗ್ಯಾಂಗ್ ಗಂಭೀರವಾಗಿ ಹಲ್ಲೆ ನಡೆಸಿತ್ತು.

Leave A Reply

Your email address will not be published.