EBM News Kannada
Leading News Portal in Kannada

ಸಿಎಂ ಕುಮಾರಸ್ವಾಮಿ- ಇನ್ಫೋಸಿಸ್ ನಾರಾಯಣಮೂರ್ತಿ ಭೇಟಿ, ಬೆಂಗಳೂರು ಅಭಿವೃದ್ಧಿ ಸಂಬಂಧ ಚರ್ಚೆ

0

ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿ ಹಾಗು ತ್ಯಾಜ್ಯ ನಿರ್ವಹಣೆ ಸಂಬಂಧ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರೊಡನೆ ಚರ್ಚಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಜಯನಗರದ ನಾರಾಯಣಮೂರ್ತಿ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬೆಂಗಳೂರಿನ ಬೆಳವಣಿಗೆ ಸೇರಿ ನಾನಾ ವಿಚಾರದ ಕುರಿತಂತೆ ಮಾತುಕತೆ ನಡೆಇಸಿದ್ದಾರೆ.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ವಿಚಾರದಲ್ಲಿ ಸಮಿತಿ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಲಹೆ ನಿಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಕೇಳಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಚನೆಯಾಗುವ ಈ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಲಿದ್ದು ಪ್ರಗತಿ ಪರಿಶೀಲನೆ ಮಾಡಲಿದೆ. ನಾರಾಯಣಮೂರ್ತಿ ಮಾತನಾಡಿ “ನೀವು ಸದಾ ಜನಪರ ಕಾಳಜಿ ಇರಿಸಿಕೊಳ್ಳುತ್ತೀರಿ, ನಿರಂತರ ಕೆಲಸ ಮಾಡುತ್ತೀರಿ” ಎಂದು ಕುಮಾರಸ್ವಾಮಿ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

ಕುಮಾರಸ್ವಾಮಿ ಇಸ್ರೇಲ್ ಗೆ ತೆರಳಿ ಅಲ್ಲಿನ ಕೃಷಿ ಪದ್ಧತಿ ಬಗ್ಗೆ ಅದ್ಯಯನ ನಡೆಸಿದ ಕುರಿತು ನಾರಾಯಣಸ್ವಾಮಿ ಮೆಚ್ಚುಗೆ ಸೂಚಿಸಿದ್ದಾರೆ..

ನಗರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್ ಜಿ ಓಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಅವರು ಸಲಹೆ ನಿಡಿದ್ದಾರೆ.

Leave A Reply

Your email address will not be published.