EBM News Kannada
Leading News Portal in Kannada

ದುರ್ಬಲಗೊಂಡ ವರ್ತೂರು ಸೇತುವೆ: ಭಾರೀ ವಾಹನಗಳಿಗೆ ನಿರ್ಬಂಧ

0

ಬೆಂಗಳೂರು: ಭಾರೀ ವಾಹನಗಳಿಗೆ ವರ್ತೂರು ಸೇತುವೆಯಲ್ಲಿ ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ.

ಹಲವಾರು ಸಮಯದಿಂದ ವರ್ತೂರು ಸೇತುವೆಯಲ್ಲಿ ವಾಹನ ಸಾಗುವಾಗ ಕಂಪಿಸುತ್ತದೆ ಎಂದು ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ನಿರ್ಧಾರ ಪ್ರಕಟಿಸಿದೆ.

30 ಟನ್‌ಗಿಂತ ಹೆಚ್ಚು ಭಾರ ಹೊಂದಿರುವ ವಾಹನ, ವಾಣಿಜ್ಯ ಸಾಗಾಣಿಕೆಗೆ ಬಳಸುವ ಟ್ರಕ್‌ಗಳಿಗೆ ವರ್ತೂರು ಸೇತುವೆಯಲ್ಲಿ ಸಾಗುವುದು ನಿರ್ಬಂಧಿಸಲಾಗಿದೆ. ಗುರುವಾರದಿಂದಲೇ ಆದೇಶ ಪಾಲನೆಯಾಗುತ್ತಿದೆ.

ಶಾಲಾ ವಾಹನ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಹಾಗೂ ಕಾರುಗಳ ಸಂಚಾರಕ್ಕೆ ಯಾವುದೇ ತೊಡಕಿಲ್ಲ ಎಂದು ತಿಳಿಸಲಾಗಿದೆ. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಿಗೆ ಬಿಬಿಎಂಪಿ ಪತ್ರ ಬರೆದಿದೆ.

ಪಾಲಿಕೆಗೆ ಸಲ್ಲಿಕೆಯಾದ ದೂರಿನ ಹಿನ್ನೆಲೆಯಲ್ಲಿ ಪರಿಣಿತ ಇಂನಿಯರ್‌ಗಳ ತಂಡ ಸೇತುವೆಯ ಗುಣಮಟ್ಟ ಹಾಗೂ ಸಾಮರ್ಥ್ಯವನ್ನು ಪರಿಶೀಲಿಸಿದೆ. ಅಂದಾಜು ಒಂದು ತಿಂಗಳ ಅವಧಿಯಲ್ಲಿ ಸೇತುವೆಯನ್ನು ದುರಸ್ಥಿಗೊಳಿಸಲು ಸಾಧ್ಯವಿದ್ದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಇಂಜಿನಿಯರ್‌ ಸೋಮಶೇಖರ್‌ ಮಾಹಿತಿ ನೀಡಿದ್ದಾರೆ.

ಸರ್ಜಾಪುರ ಭಾಗದಿಂದ ಬರುವ ಭಾರೀ ವಾಹನಗಳು ಚಿಕ್ಕತಿರುಪತಿ ರಸ್ತೆಯಲ್ಲಿ ಹಾಗೂ ಹೊಸಕೋಟೆ ಭಾಗದಿಂದ ಬರುವ ವಾಹನ ತಿರುಮಲಶೆಟ್ಟಿ ಹಳ್ಳಿಯ ಭಾಗದಿಂಧ ಸಾಗುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.