EBM News Kannada
Leading News Portal in Kannada

ಸ್ವಾತಂತ್ರ್ಯ ದಿನದಂದೇ ತಾಲೂಕು ಕಚೇರಿ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

0



ಬೆಂಗಳೂರು ಗ್ರಾಮಾಂತರ, ಆ.15: ಸ್ವಾತಂತ್ರ್ಯ ದಿನಾಚರಣೆಯಂದೆ ಹೊಸಕೋಟೆ ತಾಲೂಕು ಕಚೇರಿ ಮೇಲಿಂದ ಬಿದ್ದು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಬಿಹಾರ ಮೂಲದ ಪ್ರೇಮ್ ಬಾಸ್ಕಿ ಎಂಬುವವರು ತಾಲೂಕು ಕಚೇರಿ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.

ಇನ್ನು ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.