Namma Metro: ಬೈಯ್ಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ಮಾರ್ಗ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ, ನೇರಳೆ ಮಾರ್ಗ ಪ್ರಯಾಣಿಕರಿಗೆ ಸಿಹಿಸುದ್ದಿ
BMRCL Metro: ಬೈಯ್ಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ರೈಲು ಮಾರ್ಗವು ಸೆಪ್ಟೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಎರಡು ಕಿಲೋಮೀಟರ್ ರೈಲು ಮಾರ್ಗವು ಈ ಆಗಸ್ಟ್ ತಿಂಗಳಲ್ಲಿಯೇ ಉದ್ಘಾಟನೆಯಾಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿತ್ತು.