EBM News Kannada
Leading News Portal in Kannada

ಬಿಬಿಎಂಪಿ ಗುತ್ತಿಗೆದಾರರ ಜತೆ ಶಾಸಕ ಆರ್ ಅಶೋಕ್ ಚರ್ಚೆ: ಕಾಂಗ್ರೆಸ್​ಗೆ ಸಾಲು ಸಾಲು ಪ್ರಶ್ನೆ – Kannada News | Mla R Ashoka discusses with BBMP contractors: 11 questions to Congress

0


ಬಿಬಿಎಂಪಿ ಗುತ್ತಿಗೆದಾರ ಹಣ ಬಿಡುಗಡೆ ವಿಳಂಬ ವಿಚಾರವಾಗಿ ಗುರುವಾರ ಶಾಸಕ ಆರ್ ಅಶೋಕ್ ಕಛೇರಿಗೆ ಬಿಬಿಎಂಪಿ ಗುತ್ತಿಗೆದಾರರು ಭೇಟಿ ನೀಡಿ ಚರ್ಚಿಸಿದ್ದಾರೆ. ನಮ್ಮ ಹೋರಾಟಕ್ಕೆ ಸಹಕಾರ ನೀಡುವಂತೆ ಗುತ್ತಿಗೆದಾರರಿಂದ ಮನವಿ ಮಾಡಲಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಅಶೋಕ್ ಹನ್ನೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಶಾಸಕ ಆರ್​. ಅಶೋಕ್

ಬೆಂಗಳೂರು, ಆಗಸ್ಟ್​ 10: ನಮ್ಮ ಮೇಲೆ 40% ಅಂತ ಸುಳ್ಳು, ನಿರಾಧಾರ ಆರೋಪ ಮಾಡಿ ಅಧಿಕಾರಕ್ಕೆ ಬಂದ್ದರಲ್ಲಾ, ಈಗ ನಿಮ್ಮ ಮೇಲೆ 15% ಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಆರ್​​. ಅಶೋಕ್ (Mla R Ashoka)​ ಪ್ರಶ್ನೆ ಮಾಡಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಹಣ ಬಿಡುಗಡೆ ವಿಳಂಬ ಹಿನ್ನೆಲೆ ಇಂದು ಶಾಸಕ ಆರ್ ಅಶೋಕ್ ಕಛೇರಿಗೆ ಬಿಬಿಎಂಪಿ ಗುತ್ತಿಗೆದಾರರು ಭೇಟಿ ನೀಡಿ ಚರ್ಚಿಸಿದ್ದಾರೆ. ಇದೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಆರ್​​. ಅಶೋಕ್ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್​ಗೆ ಶಾಸಕ ಆರ್​​. ಅಶೋಕ್ ಪ್ರಶ್ನೆ

 • ನೀವು ಕಮಿಷನ್ ಕೇಳಿಲ್ಲ ಅಂದರೆ ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡಿ ಅಂತ ಸವಾಲು ಹಾಕಿದ್ದಾರೆ. ಈ ಸವಾಲನ್ನು ಒಪ್ಪಿಕೊಂಡಿಲ್ಲ ಯಾಕೆ?
 • ಕಮಿಷನ್ ದಂದೆ ಶುರುಮಾಡಿರುವುದು ಲೋಕಸಭೆ ಚುನಾವಣೆಗೆ ಫಂಡ್‌ ಸಂಗ್ರಹಕ್ಕಾ?
 • ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದಾಗಿ ವಾಗ್ದಾನ ಮಾಡಿ ಅಧಿಕಾರ ಹಿಡಿದ ನೀವು ಈಗ ಅವರ ಕಡೆಗಣನೆ ಮಾಡುತ್ತಿರುವುದು ಎಷ್ಟು ಸರಿ?
 • ಬಿಬಿಎಂಪಿಯಲ್ಲಿ 2019-2023 ರವರೆಗೆ ನಡೆದಿರುವ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತಿದ್ದೀರಿ, ನೀವು ಪ್ರಾಮಾಣಿಕರಾಗಿದ್ದರೆ 2013 ರಿಂದಲೂ ತನಿಖೆ ಮಾಡಬಹುದಲ್ಲಾ?
 • ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ ಬಳುವಳಿಗರ ಇವರು?
 • ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದರೆ ನಿಮ್ಮ ಬ್ರಾಂಡ್ ಬೆಂಗಳೂರು ಕಥೆ ಏನು?
 •  300 ಜನ ಗುತ್ತಿಗೆದಾರರು ದಯಾ ಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಕಾಂಗ್ರೆಸ್‌ ಉತ್ತರ ಏನು?
 • ದೆಹಲಿಯಲ್ಲಿ ಮಂತ್ರಿಗಳ ಕರೆಸಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲಿಸೋದಕ್ಕೋ ಅಥವಾ ಸೂಟ್‌ಕೇಸ್ ತುಂಬಿಸೋಕ್ಕೋ?
 • ಡಿ ಕೆ ಶಿವಕುಮಾರ್ ಅವರೇ ನಿಮ್ಮದು ಬ್ರಾಂಡ್ ಬೆಂಗಳೂರೋ ಅಥವಾ ಬ್ಲಾಕ್
  ಬೆಂಗಳೂರೋ?
 • ಸಿಎಂ ಹಣ ಬಿಡುಗಡೆ ಮಾಡಿದ್ರೆ, ಡಿಸಿಎಂ ತಡೆ ಹಿಡಿದಿದ್ದಾರೆ ಹಾಗಾದರೆ ಹಣ ಬಿಡುಗಡೆ ಮಾಡಲು ಸಿ ಎಂ ಗೆ ವೇಣುಗೋಪಾಲ್ ಸೂಚನೆ ನೀಡಿದ್ರೆ ಸುರ್ಜೆವಾಲ ತಡೆನೀಡಲು ಸೂಚನೆ ನೀಡಿದ್ರಾ? ಹೀಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ ಶಾಸಕ ಆರ್​.ಅಶೋಕ್​ ಕಾಂಗ್ರೆಸ್​ನವರು ನಾವು ಒಂದು ರುಪಾಯಿನೂ ತಿಂದಿಲ್ಲ ಎನ್ನುತ್ತಾರೆ. 2 ತಿಂಗಳಿಂದ ಯಾವುದೇ ಯೋಜನೆಗೆ ಅನುಮೋದನೆ ನೀಡಿಲ್ಲ. ಬೆಂಗಳೂರು ಉಸ್ತುವಾರಿ ಸಚಿವರು 26 ಕಂಡಿಷನ್ ಹಾಕಿದ್ದಾರೆ. ಗಮನಕ್ಕೆ ತರದೆ ವರ್ಗಾವಣೆ ಮಾಡುವಂತಿಲ್ಲ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ ಎಂದರು.

ನಾನು ಕೂಡ 4 ಬಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೇನೆ. ಒಂದು ಬಾರಿಯೂ ಕೂಡ ಹೀಗೆ ನಡೆದುಕೊಂಡಿಲ್ಲ. ಲೋಕಸಭಾ ಚುನಾವಣೆಗೆ ಕರ್ನಾಟಕವನ್ನು ಲೂಟಿ ಮಾಡ್ತಿದ್ದೀರಾ? ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ತಿದ್ದಾರೆಂದು ಅಮಿತ್​ ಶಾ ಹೇಳಿದ್ದರು. ಅದೇ ರೀತಿ ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Published On – 2:54 pm, Thu, 10 August 23

ತಾಜಾ ಸುದ್ದಿ

Leave A Reply

Your email address will not be published.