EBM News Kannada
Leading News Portal in Kannada

Breaking News Today Live: ಬೈಕ್ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಕ್ರೇಜಿ ಬೈಕ್ ರೈಡರ್ ಅರೆಸ್ಟ್ – Kannada News | Karnataka News Live Congress Government Siddaramaiah Congress JDS BJP Karnataka Politics Lok Sabha Polls

0


 • 10 Aug 2023 08:30 AM (IST)

  Breaking News Today Live: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್

  ಮೈಸೂರು: ನಗರದ ಕೆಆರ್​ಎಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ರಾಜೀವ್ ನಗರದ ಆರೋಪಿ ಜುಬೇರ್(21)ನನ್ನು ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಆರೋಪಿ ಆಸೀಫ್ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಬಳಿಯಿದ್ದ 9 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ದೇವರಾಜ ಠಾಣೆ ಇನ್ಸ್​ಪೆಕ್ಟರ್ ಟಿ.ಬಿ.ಶಿವಕುಮಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

 • 10 Aug 2023 08:29 AM (IST)

  Breaking News Today Live: ಚಿತ್ರದುರ್ಗದಲ್ಲಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ದಾಖಲಾಗುವವರ ಸಂಖ್ಯೆ ಇಳಿಕೆ

  ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿ ಕಲುಷಿತ ನೀರು ಸೇವನೆಯಿಂದ‌ ಈವರೆಗೆ 226 ಜನರು ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದುವರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ 188 ಜನರು. ಅಸ್ವಸ್ಥ 33 ಜನರಿಗೆ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ದಾಖಲಾಗುವವರ ಸಂಖ್ಯೆ ಇಳಿಕೆಯಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ರಂಗನಾಥ್​ ಮಾಹಿತಿ ನೀಡಿದ್ದಾರೆ.

 • 10 Aug 2023 08:25 AM (IST)

  Breaking News Today Live: ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ

  ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ್ ತಾಂಡಾಕ್ಕೆ ಬೇಟಿ ನೀಡಿದ್ದ ಡಿಸಿ ಸುಶೀಲಾ ಬಿ ಅವರು ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ ಮಾಡಿದರು. ರೇವುನಾಯ್ಕ ತಾಂಡಾ ಮಕ್ಕಳಿಗೆ ಪಾಠ ಮಾಡಿ ಗಮನ ಸೆಳೆದರು. ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿಕೊಟ್ಟರು.

 • 10 Aug 2023 08:23 AM (IST)

  Breaking News Today Live: ಸಸ್ಪೆಂಡ್ ಆದ ಅಧಿಕಾರಿಗೆ ಸರ್ಕಾರ ಬಡ್ತಿ ಗಿಫ್ಟ್

  ಗದಗ ನಗರಸಭೆ ಕಂದಾಯ ಅಧಿಕಾರಿ ಮಹೇಶ ಹಡಪದ ಅಮಾನತು ಆದ ಅಧಿಕಾರಿಗೆ ಮುಖ್ಯಾಧಿಕಾರಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನಿಯೋಜನೆ ಮಾಡಿದೆ. ಕಾನೂನು ಉಲ್ಲಂಘಿಸಿ ಫಾರ್ಮ್ 3 ನೀಡಿ ಕರ್ತವ್ಯ ಲೋಪ ಎಸಗಿದ್ದಾರೆಂದು 25 ಜುಲೈ ರಂದು ಅಮಾನತು ಮಾಡಿ ಡಿಸಿ ವೈಶಾಲಿ ಆದೇಶ ಮಾಡಿದ್ರು.

 • 10 Aug 2023 08:21 AM (IST)

  Breaking News Today Live: ಬೆಂಗಳೂರಿನಲ್ಲಿ ಉಬರ್​ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ

  ಬೆಂಗಳೂರಿನಲ್ಲಿ ಉಬರ್​ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಬುಕ್ ಮಾಡಿದ್ದ ಮಹಿಳೆ. ಈ ವೇಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿದೆ. ಆಗ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತಿದ್ದಾರೆ. ಬೇರೆ ಕ್ಯಾಬ್ ಎಂದು ಗೊತ್ತಾಗಿ ಕ್ಯಾಬ್​ನಿಂದ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಕಾರು ಚಲಾಯಿಸಲು ಚಾಲಕ ಮುಂದಾಗಿದ್ದು ಬಳಿಕ ದಿಢೀರನೆ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆಗೈದಿದ್ದಾನೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ದೃಶ್ಯ ಅಪಾರ್ಟ್‌ಮೆಂಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 • 10 Aug 2023 08:17 AM (IST)

  Breaking News Today Live: ಪೊಲೀಸರ ಅತಿಥಿಯಾದ ಕ್ರೇಜಿ ಬೈಕ್ ರೈಡರ್

  ವಿಶೇಷ ವೇಷಭೂಷಣ ಧರಿಸಿ ಬೈಕ್​ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಲರ್ ಫುಲ್ ಆಗಿ ಬೈಕ್ ಆಲ್ಟರ್ ಮಾಡಿ ಕೆಐಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್‌ ಜಂಪ್ ಮಾಡಿ ಬೈಕ್ ಗೆ ಕಾರು ತಾಕಿಸಿದ ಎಂಬ ಕಾರಣಕ್ಕೆ ಕಾರನ್ನ ಹಿಂಬಾಲಿಸಿ ಕನ್ನಡಿ ಹೊಡೆದು ಹಾಕಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

 • 10 Aug 2023 08:12 AM (IST)

  Breaking News Today Live: ಸಂಚಾರ ನಿಯಮ ಉಲ್ಲಂಘನೆ, ಮನೆ ಮನೆಗೆ ತೆರಳಿ ದಂಡ ವಸೂಲಿ

  ಮೈಸೂರಿನಲ್ಲಿ ಸಂಚಾರ ನಿಯಮ‌ ಉಲ್ಲಂಘನೆ ಹೆಚ್ಚುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ತಡೆಗಟ್ಟಲು ಸಂಚಾರ ಪೊಲೀಸರು ವಿನೂತನ ಅಭಿಯಾನ ಹಮ್ಮಿಕೊಂಡಿದ್ದಾರೆ. ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಫೋಟೋ ಜೊತೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ.

 • 10 Aug 2023 08:11 AM (IST)

  Breaking News Today Live: ಮೈಸೂರಿನಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

  ಮೈಸೂರು ಜಿಲ್ಲೆ ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ತಾಲೂಕಿನ ತುರುಗನೂರು ಗ್ರಾಮದ ಸಮೀಪದ ಕಿರು ಅರಣ್ಯ ಪ್ರದೇಶದ ಬಳಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ. ಚಿರತೆ ಮೇಕೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.

 • 10 Aug 2023 08:07 AM (IST)

  Breaking News Today Live: ಕೊಬ್ಬರಿ ಬೆಲೆ ಕುಸಿತ, ಇಂದು ತಿಪಟೂರು ಬಂದ್​ಗೆ ಕರೆ

  ಕೊಬ್ಬರಿ ಬೆಲೆ ನಿರಂತರವಾಗಿ ಕುಸಿತ ಹಿನ್ನೆಲೆ ಕ್ವಿಂಟಾಲ್ ಗೆ 20 ಸಾವಿರ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಇಂದು ತಿಪಟೂರು ಬಂದ್​ಗೆ ಕರೆ ಕೊಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೊತೆಗೆ ವಿವಿಧ ರೈತ ಪರ ಸಂಘಟನೆಗಳಿಂದ ತಿಪಟೂರು ಬಂದ್ ಗೆ ಕರೆ ಕೊಟ್ಟಿದ್ದಾರೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಯಾರು ಸ್ಪಂದಿಸುತ್ತಿಲ್ಲ ಎಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ‌ಗೆ ಕರೆ ನೀಡಿದ್ದಾರೆ.

 • Leave A Reply

  Your email address will not be published.