EBM News Kannada
Leading News Portal in Kannada

ಸ್ಪಂದನ ಅಂತ್ಯಸಂಸ್ಕಾರ: ಪಾತಕಿಗಳನ್ನು ಥರಗುಟ್ಟುವಂತೆ ಮಾಡಿದ್ದ ಬಿಕೆ ಶಿವರಾಂ ಹರಿಶ್ಚಂದ್ರ ಘಾಟ್ ನಲ್ಲಿ ದೈನೇಸಿಯಾಗಿ ಕೂತಿದ್ದರು – Kannada News | BK Shivaram who spelt terror in the minds of criminals was at loss in Harishchandra Ghat

0


ಬೆಂಗಳೂರು: ಬಿಕೆ ಶಿವರಾಂ (BK Shivaram)-ಈ ಹೆಸರು ಕೇಳಿದರೆ ಪಾತಕ ಲೋಕ (crime world) ಥರಗುಟ್ಟುತ್ತಿತ್ತು, ಎಂಟೆದೆಯ ರೌಡಿ ಶೀಟರ್ ಕೂಡ ಬೆವರುತ್ತಿದ್ದ. ಅಂಥ ಗಂಡೆದೆಯ ದಕ್ಷ ಪೊಲೀಸ್ ಅಧಿಕಾರಿಗೆ (police officer) ಇವತ್ತು ಬಂದೊದಗಿರುವ ಸ್ಥಿತಿ ನೋಡಿ. ಕೇವಲ 41ರ ಪ್ರಾಯದ ಮಗಳು ಸ್ಪಂದನಾಳನ್ನು ಕಳೆದುಕೊಂಡು ಹರಿಶ್ಚಂದ್ರಘಾಟ್​ನಲ್ಲಿ ದೈನೇಸಿಯಾಗಿ ಕೂತಿದ್ದಾರೆ. ಯಾವುದೇ ತಂದೆತಾಯಿ ತಮಗಿಂತ ಮೊದಲು ಮಕ್ಕಳು ನಿಧನಾರಾಗುವ ಸ್ಥಿತಿಯನ್ನು ನೋಡಲಾರರು, ಅರಗಿಸಿಕೊಳ್ಳಲಾರರು. 71-ವರ್ಷ ವಯಸ್ಸಿನ ಶಿವರಾಂಗೆ ಇಳಿವಯಸ್ಸಿಲ್ಲಿ ಇಂಥ ಆಘಾತ ಎದುರಾಗಬಾರದಿತ್ತು. ಪೊಲೀಸ್ ಸೇವೆಯಿಂದ ನಿವೃತ್ತರಾದ ಬಳಿಕ ಅವರು ರಾಜಕಾರಣದಲ್ಲಿ ಹೆಸರು ಮಾಡುವ ವಿಫಲ ಯತ್ನ ಮಾಡಿದರು. ಅವರ ಕಿರಿಯ ಸಹೋದರ ಬಿಕೆ ಹರಿಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಹೆಸರು. ಅದರೆ ರಾಜಕಾರಣ ನಿವೃತ್ತ ಖಡಕ್ ಪೊಲೀಸ್ ಅಧಿಕಾರಿಗೆ ಒಲಿಯಲಿಲ್ಲ. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ ವಿಶ್ರಾಂತ ಬದುಕು ನಡೆಸುತ್ತಿದ್ದ ಶಿವರಾಂ ಇನ್ನು ಮೇಲೆ ಅಗಲಿದ ಮಗಳನ್ನು ನೆನೆಯುತ್ತಾ ಬದುಕು ಸವೆಸಬೇಕಿದೆ.

 

 

Related Video

Leave A Reply

Your email address will not be published.