EBM News Kannada
Leading News Portal in Kannada

ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಸಿಗದ ಎರಡನೇ ಸೆಟ್ ಸಮವಸ್ತ್ರ: ಶಿಕ್ಷಣ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ಬೇಸರ – Kannada News | Bagalkote News: Second set of uniforms not available even after two months of opening of schools: Students upset with education department

0


Bagalkote News: ಬಾಗಲಕೋಟೆ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ. ಸರಕಾರಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೆ ಇದುವರೆಗೂ ಜಿಲ್ಲೆಯಲ್ಲಿ ಸರಕಾರಿ ಶಾಲಾ‌ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರವನ್ನು ನೀಡಿಲ್ಲ. ಇದರಿಂದ ಲಕ್ಷಾಂತರ ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರ ಭಾಗ್ಯ ಸಿಗದಂತಾಗಿದೆ.

ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಸಿಗದ ಎರಡನೇ ಸೆಟ್ ಸಮವಸ್ತ್ರ: ಶಿಕ್ಷಣ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ಬೇಸರ

ವಿದ್ಯಾರ್ಥಿಗಳು

ಬಾಗಲಕೋಟೆ ಆಗಸ್ಟ್​ 09: ಶಾಲೆಗಳಲ್ಲಿ ಮಕ್ಕಳೆಲ್ಲರಲ್ಲೂ (Students) ಸಮಾನತೆ ಇರಲಿ ಶಿಸ್ತು ಇರಲಿ ಅಂತ ಸಮವಸ್ತ್ರ ‌ಮಾಡಿದ್ದಾರೆ.ಶಾಲೆಯ ಶಿಕ್ಷಣದ ಒಂದು ಭಾಗ ಸಮವಸ್ತ್ರ. ಆದರೆ ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಇಂದಿಗೂ ಎರಡನೇ ಸೆಟ್ ಸಮವಸ್ತ್ರ ಮಕ್ಕಳಿಗೆ ಸಿಕ್ಕಿಲ್ಲ. ಇದರಿಂದ ಒಂದೇ ಜೊತೆ ಸಮವಸ್ತ್ರದಲ್ಲಿ ಮಕ್ಕಳು ವಾರವಿಡೀ ದಿನ‌ ಕಳೆಯುವಂತಾಗಿದೆ.

ಹಳೆ ಸಮವಸ್ತ್ರ ಧರಿಸಿ ಶಾಲೆಗೆ ಹಾಜರು

ಬಾಗಲಕೋಟೆ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ. ಸರಕಾರಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೆ ಇದುವರೆಗೂ ಜಿಲ್ಲೆಯಲ್ಲಿ ಸರಕಾರಿ ಶಾಲಾ‌ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರವನ್ನು ನೀಡಿಲ್ಲ. ಇದರಿಂದ ಲಕ್ಷಾಂತರ ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರ ಭಾಗ್ಯ ಸಿಗದಂತಾಗಿದೆ. ಕೆಲ ಮಕ್ಕಳು ಬೇರೆ ಬೇರೆ ಬಟ್ಟೆಯಲ್ಲಿ ಶಾಲೆಗೆ ಬರುತ್ತಿದ್ದಾರೆ‌. ಕೆಲ‌ ವಿದ್ಯಾರ್ಥಿಗಳು ಎರಡನೆ ಸೆಟ್​ಗೆ ಪರ್ಯಾಯವೆಂಬಂತೆ ಹಳೆ ಸಮವಸ್ತ್ರ ಧರಿಸಿ ಶಾಲೆಗೆ ಹಾಜರಾಗುತ್ತಿದ್ದಾರೆ.

ಆದಷ್ಟು ಬೇಗ ಸಮವಸ್ತ್ರ ಕೊಡಿ

ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮೊದಲ‌ ಸೆಟ್ ಸಮವಸ್ತ್ರ ಸಿಕ್ಕಿದ್ದು ಎರಡನೇ ಸೆಟ್ ಸಮವಸ್ತ್ರ ಸಿಕ್ಕಿಲ್ಲ. ಇದರಿಂದ ವಿದ್ಯಾರ್ಥಿಗಳು ನಮಗೆ ಆದಷ್ಟು ಬೇಗ ಎರಡನೇ ಸೆಟ್ ಸಮವಸ್ತ್ರ ನೀಡಬೇಕು. ಎರಡು ಸೆಟ್ ಸಮವಸ್ತ್ರ ಇದ್ದರೆ ನಮಗೆ ವಾರಪೂರ್ತಿ ಧರಿಸೋಕೆ ಅನುಕೂಲವಾಗುತ್ತದೆ.

ಸರಕಾರ ಆದಷ್ಟು ಬೇಗ ಸಮವಸ್ತ್ರ ಕೊಡಬೇಕು ಅಂತಿದ್ದಾರೆ. ಇನ್ನು ಇದೇ ವಿಚಾರವಾಗಿ ಗರಂ ಆದ ಮಾಜಿ ಸಚಿವ ಕಾರಜೋಳ ಸಮವಸ್ತ್ರ ಕೊಟ್ಟಿಲ್ಲ ಕಾಲಿಗೆ ಬೂಟ್ ಕೊಟ್ಟಿಲ್ಲ, ನೋಟ್ ಬುಕ್ ಕೊಟ್ಟಿಲ್ಲ ಪುಸ್ತಕ ಕೊಟ್ಟಿಲ್ಲ. ಪಠ್ಯ ಬದಲಾವಣೆ ಅಂತ ಆಟಆಡುತ್ತಿದ್ದಾರೆ. ಅವರಿಗೆ ಯಾವ ಜ್ಞಾನ ಇಲ್ಲ. ಬರಿ ಡೊಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.

Published On – 9:09 pm, Wed, 9 August 23

ತಾಜಾ ಸುದ್ದಿ

Leave A Reply

Your email address will not be published.