ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಭೂಪ – Kannada News | Mysuru News: Boy destroys 850 arecanut trees for not marrying off daughter
Mysuru News: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂಬ ದ್ವೇಷಕ್ಕೆ ಕಷ್ಟ ಪಟ್ಟು ಬೆಳೆದಿದ್ದ 850 ಅಡಕೆ ಗಿಡಗಳನ್ನು ಓರ್ವ ಯುವಕ ನಾಶ ಮಾಡಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಡಕೆ ಗಿಡ ನಾಶ
ಮೈಸೂರು, ಆಗಸ್ಟ್ 09: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲವೆಂಬ ದ್ವೇಷಕ್ಕೆ ಕಷ್ಟ ಪಟ್ಟು ಬೆಳೆದಿದ್ದ 850 ಅಡಕೆ ಗಿಡ (arecanut) ಗಳನ್ನು ಓರ್ವ ಯುವಕ ನಾಶ ಮಾಡಿರುವಂತಹ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಕಡೇ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ಎಂಬುವರಿಗೆ ಸೇರಿದ 3 ಎಕರೆಯಲ್ಲಿ ಬೆಳೆದಿದ್ದ ಅಡಕೆ ಗಿಡಗಳನ್ನು ಅಶೋಕ್ ಎಂಬಾತ ನಾಶ ಮಾಡಿದ್ದಾನೆ.
ವೆಂಕಟೇಶ್ ಪುತ್ರಿಯನ್ನ ಅಶೋಕ್‌ಗೆ ಕೊಡಲು ಮಾತುಕತೆ ನಡೆದಿತ್ತು. ಹುಡುಗ ಸರಿಯಿಲ್ಲ ಎಂದು ಮದುವೆಗೆ ವೆಂಕಟೇಶ್ ಪುತ್ರಿ ಒಪ್ಪಿರಲಿಲ್ಲ. ಅಂದಿನಿಂದ ವೆಂಕಟೇಶ್ ಕುಟುಂಬದವರನ್ನು ಅಶೋಕ್ ದ್ವೇಷಿಸುತ್ತಿದ್ದ. ಈ ಹಿಂದೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ನಾಶ ಮಾಡಿದ್ದಾನೆ ಎನ್ನಲಾಗುತ್ತಿದೆ.
ನಿನ್ನೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಅಡಕೆ ಗಿಡ ನಾಶ ಮಾಡಿರುವುದಾಗಿ ಆರೋಪಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಭಾರೀ ಮಳೆ: 1234 ಹೆಕ್ಟರ್ ನಷ್ಟು ಬೆಳೆ ಹಾನಿ
ಬಿದರ್: ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ಮಳೆಯಿಂದಾಗಿ 1234 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹುಲುಸಾಗಿ ಬೆಳೆದ ಉದ್ದು ಸೋಯಾ, ಹೆಸರು ಬೆಳೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಸುಮಾರು 375 ಮನೆಗಳು ಬಾಗಶಹ ಕುಸಿದಿದ್ದು ಮನೆ ಕಳೆದುಕೊಂಡವರನ್ನ ಕಂಗಾಲು ಮಾಡಿದೆ. ಸರಕಾರ ಭಾಗಶ ಮನೆಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಹಣವನ್ನ ಕೊಡುತ್ತಿದೆ, ಆದರೆ ಈ ದುಬಾರಿ ದುನಿಯಾದಲ್ಲಿ ಸರಕಾರ ಕೊಡುವ ಹತ್ತು ಸಾವಿರ ರೂಪಾಯಿ ಸಾಲಾದಾಗಿದ್ದು, ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅವತ್ತಿನ ದುಡಿಮೆಯಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಏಕಾಏಕಿ ಮನೆ ಕುಸಿದಿರುವ ಪರಿಣಾಮವಾಗಿ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಲೇ ಬೇಕಾಗಿದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಆದರೆ ಮೊದಲೆ ಮನೆ ಕಟ್ಟುವ ಮುನ್ನ ಸಾಲಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ ಆ ಸಾಲವೇ ಇನ್ನೂ ಹರೆದಿಲ್ಲ. ಇದರ ನಡುವೆ ಮತ್ತೆ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಬೇಕಾದರೆ ಸಾಲ ಮಾಡುವ ಅನಿವಾರ್ಯತೆ ಜನರಿಗೆ ಬಂದಿದೆ.
ಮನೆಕಳೆದುಕೊಂಡ ಕೆಲವರಿಗೆ ಪರಿಹಾರ ಕೊಟ್ಟರೆ ಇನ್ನೂ ಕೆಲವರಿಗೆ ಪರಿಹಾರ ಕೊಡಬೇಕಾಗಿದೆ. ಆದರೆ ಸರಕಾರ ನಮಗೆ ಹಣ ಕೊಡುವ ಬದಲು ಬಿದ್ದಿರುವ ಮನೆಯನ್ನ ಕಟ್ಟಿಸಿಕೊಡಿ ಎಂದು ಇಲ್ಲಿನ ಮಹಿಳೆಯವರು ಸರಕಾರಕ್ಕೆ ಜಿಲ್ಲಾಡಳಿತಕ್ಕೆ ಸ್ಥಳಿಯ ಶಾಸಕರಿಗೆ ಮನವಿ ಮಾಡುತ್ತಿದ್ದಾರೆ.
Published On – 10:41 pm, Wed, 9 August 23