ಕಾರು ಹರಿದು ಶಾಲಾ ಮಕ್ಕಳಿಬ್ಬರು ಸಾವು: 5ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ – Kannada News | Ramanagara News: Two school children death, over 5 injured as car runs over them
Ramanagara News: ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೊಲೆರೊ ಕಾರು ಹರಿದು ಶಾಲಾ ಮಕ್ಕಳಿಬ್ಬರು ಸಾವನ್ನಪ್ಪಿದ್ದು, 5ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ರಾಮನಗರದ ಗೌಡರದೊಡ್ಡಿ ಬಳಿ ನಡೆದಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾತಿನಿಧಿಕ ಚಿತ್ರ
ರಾಮನಗರ, ಆಗಸ್ಟ್ 09: ಕಾರು ಹರಿದು ಇಬ್ಬರು ಶಾಲಾ ಮಕ್ಕಳ ಸಾವನ್ನಪ್ಪಿದ್ದು (death) , ಐದಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ರಾಮನಗರದ ಲಕ್ಷ್ಮೀಪುರ ಬಳಿ ನಡೆದಿದೆ. ಶಾಲಿನಿ(8), ದರ್ಶನ್ (5) ಮೃತ ದುರ್ದೈವಿಗಳು. ಉಳಿದ ಮಕ್ಕಳಿಗೆ ರಾಮಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾಮನಗರ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.