EBM News Kannada
Leading News Portal in Kannada

ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ; ಇಬ್ಬರು ಆರೋಪಿಗಳು ಅಂದರ್​ – Kannada News | A group of youths broke into a mobile shop and beat up the owner in Mangaluru The two accused are Arrest

0


ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯಿರುವ ದುಬೈ ಮಾರ್ಕೆಟ್​ನಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿದ ಯುವಕರ ಗುಂಪೊಂದು ಅಂಗಡಿ ಮಾಲೀಕನಿಗೆ ತಳಿಸಿದ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.

ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ; ಇಬ್ಬರು ಆರೋಪಿಗಳು ಅಂದರ್​

ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ಮಾಲೀಕನಿಗೆ ಥಳಿತ

ಮಂಗಳೂರು, ಆ.9: ನಗರದ ಸೆಂಟ್ರಲ್ ಮಾರ್ಕೆಟ್ ಬಳಿಯಿರುವ ದುಬೈ ಮಾರ್ಕೆಟ್​ನಲ್ಲಿ ಮೊಬೈಲ್ ಅಂಗಡಿ(Mobile Shop)ಗೆ ನುಗ್ಗಿದ ಯುವಕರ ಗುಂಪೊಂದು ಅಂಗಡಿ ಮಾಲೀಕನಿಗೆ ತಳಿಸಿದ ಘಟನೆ ನಡೆದಿದೆ. ಹೌದು, ಗ್ರಾಹಕನೋರ್ವ ಪವರ್ ಬ್ಯಾಂಕ್ ರಿಪೇರಿಗೆಂದು ಅಂಗಡಿಗೆ ಬಂದಿದ್ದ. ಅಂಗಡಿ ಮಾಲೀಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುವುದಿಲ್ಲ ಎಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಬಂದಿದ್ದ ಯುವಕ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಮೊಬೈಲ್ ಅಂಗಡಿ ಮಾಲೀಕನಿಗೆ ಥಳಿಸಿ ಯುವಕರು ಪರಾರಿ

ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇನ್ನು ಯುವಕ ಮಾಲೀಕನಿಗೆ ಥಳಿಸಿ, ಅಲ್ಲಿಂದ ತೆರಳಿದ್ದಾನೆ. ಇದಾದ ಬಳಿಕ ತನ್ನ ಗೆಳೆಯರ ಗುಂಪನ್ನ ಕರೆದುಕೊಂಡು ಬಂದು, ಮತ್ತೆ ಹಲ್ಲೆ ಮಾಡಿದ್ದಾನೆ. ಸುಮಾರು ಆರು ಜನರ ತಂಡದಿಂದ ಕೃತ್ಯ ಎಸಗಲಾಗಿದ್ದು, ಹಲ್ಲೆ ನಡೆಸಿದ ದೃಶ್ಯ, ಅಂಗಡಿಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವಿಸುತ್ತಿದ್ದ ನಾಲ್ವರು ಅರೆಸ್ಟ್

ಕೊಡಗು: ಮಡಿಕೇರಿ‌ನಗರ ಠಾಣಾ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು, ಗಾಂಜಾ ಸೇವಿಸುತ್ತಿದ್ದ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಮಡಿಕೇರಿ ನಗರದ ದೇಚೂರಿನಲ್ಲಿ ಗಾಂಜಾ ಸೇವಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಪ್ರಥಾಪ್, ಮೋನಿಶ್, ಅಕ್ಷಯ್, ಲಿಖಿತ್ ಎಂಬುವವರನ್ನು ಬಂಧಿಸಿದ್ದಾರೆ.

ಮಹಿಳೆಯಿಂದ ಮೊಬೈಲ್ ಕಿತ್ತು ಪರಾರಿಯಾದ ದುಷ್ಕರ್ಮಿಗಳು

ಬೆಂಗಳೂರು: ದುಷ್ಕರ್ಮಿಗಳು ಮಹಿಳೆಯಿಂದ ಮೊಬೈಲ್ ಕಿತ್ತು ಪರಾರಿಯಾದ ಘಟನೆ ಬಾಣಸ್ವಾಡಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಮಹಿಳೆಯೊಬ್ಬಳೇ ಹೋಗುತ್ತಿರುವುದನ್ನು ಒಂದು ಬಾರಿ ನೋಡಿ, ಮತ್ತೆ ವಾಪಾಸ್ ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಬೈಕ್​ನಲ್ಲಿ ಬಂದ ಇಬ್ಬರಿಂದ ಕೃತ್ಯ ಎಸಗಲಾಗಿದ್ದು, ನಿನ್ನೆ ರಾತ್ರಿ ವೇಳೆ 7 ಗಂಟೆಯ ಸಂಧರ್ಭದಲ್ಲಿ ನಡೆದಿದೆ. ಈ ಕುರಿತು ಬಾಣಸ್ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On – 3:25 pm, Wed, 9 August 23

ತಾಜಾ ಸುದ್ದಿ

Leave A Reply

Your email address will not be published.