EBM News Kannada
Leading News Portal in Kannada

ಬಂಡೀಪುರ ಸಫಾರಿಗೆ ಹೋಗುವವವರಿಗೆ ಗುಡ್ ನ್ಯೂಸ್: ಪ್ರವಾಸಿಗರಿಗೆ ಇನ್ಮುಂದೆ ವಿಮಾ ಸೌಲಭ್ಯ – Kannada News | Good news for Bandipur Safari goers: Tourists may get insurance facility

0


ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ 50 ರ ಸಂಭ್ರಮದಲ್ಲಿದೆ. ಈಗಾಗ್ಲೇ ವನ್ಯ ಸಂಪತ್ತು ವೃದ್ದಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ರೂಪಿಸಿದೆ. ಇದೀಗ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಇನ್ಶುರೆನ್ಸ್ ಮಾಡಿಸಲು ಒಂದೊಳ್ಳೆ ಹೆಜ್ಜೆ ಇಟ್ಟಿದೆ.

ಬಂಡೀಪುರ ಸಫಾರಿಗೆ ಹೋಗುವವವರಿಗೆ ಗುಡ್ ನ್ಯೂಸ್: ಪ್ರವಾಸಿಗರಿಗೆ ಇನ್ಮುಂದೆ ವಿಮಾ ಸೌಲಭ್ಯ

ಬಂಡೀಪುರ ಪ್ರವಾಸಿಗರಿಗೆ ಇನ್ಮುಂದೆ ವಿಮಾ ಸೌಲಭ್ಯ

ಬಂಡೀಪುರ ಅಂದ್ರೆ ಸಾಕು ಎಂತಹವರಿಗಾದ್ರು ಆ ಕಾಡಲ್ಲಿ ಸಫಾರಿ ಮಾಡ್ಬೇಕು ಅಂತ ಅನಿಸದೆ ಇರದು.ದೇಶ,ವಿದೇಶದಿಂದಲೂ ಪ್ರವಾಸಿಗರ (Tourists) ದಂಡೇ ಸಫಾರಿಗೆ ಆಗಮಿಸುತ್ತೆ.ಸಫಾರಿ ವೇಳೆ ಯಾವುದಾದ್ರೂ ಅವಘಡ ಸಂಭವಿಸಿದ್ರೆ ಪ್ರವಾಸಿಗರಿಗೆ ತೊಂದರೆಯಾಗುತ್ತೆ.ಅದಕ್ಕೋಸ್ಕರ ಸಫಾರಿಗೆ (Bandipur Safari) ಹೋಗುವ ಪ್ರವಾಸಿಗರಿಗೆ ಹೊಸದಾಗಿ ಇನ್ಶುರೆನ್ಸ್ (Insurance) ಮಾಡಿಸಲು ಚಿಂತನೆ ನಡೆದಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಹಚ್ಚ ಹಸಿರಿನ ಕಾನನ, ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು, ಕಿವಿಗಿಂಪು ನೀಡೋ ಪಕ್ಷಿಗಳ ನಿನಾದ.ಅಬ್ಬಾ ಬಂಡೀಪುರದಲ್ಲಿ ಸಫಾರಿ ಮಾಡಿದ್ರೆ ಸ್ವರ್ಗ ಅಂತ ಅನಿಸದೆ ಇರದು.ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಸಫಾರಿ ನಡೆಸಲು ರಾಜ್ಯದಲ್ಲಷ್ಟೇ ಅಲ್ಲದೇ ದೇಶ,ವಿದೇಶದಿಂದಲೂ ಕೂಡ ಪ್ರವಾಸಿಗರು ಆಗಮಿಸ್ತಾರೆ.

ಈ ಸಫಾರಿಗೆ ಹೋಗುವ ಪ್ರವಾಸಿಗರ ಸೇಫ್ಟಿ ಕೂಡ ಅರಣ್ಯ ಇಲಾಖೆಗೆ ಸೇರಿದೆ.ಈ ಹಿನ್ನೆಲೆ ಇನ್ಮುಂದೆ ಸಫಾರಿಗೆ ಹೋಗುವ ಪ್ರವಾಸಿಗರಿಗೆ ರಕ್ಷಣೆಯ ದೃಷ್ಟಿಯಿಂದ ಇದೀಗ ಅರಣ್ಯ ಅಧಿಕಾರಿಗಳು ಇನ್ಶುರೆನ್ಸ್ ಮಾಡಿಸುವ ಚಿಂತನೆ ನಡೆಸಿದ್ದಾರೆ.ಹೆಡ್ ಆಫೀಸ್ ನಿಂದಲೂ ಕೂಡ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಬಂದಿದೆ.ಅಲ್ಲದೇ ಈಗಾಗ್ಲೇ ಇನ್ಶುರೆನ್ಸ್ ಕಚೇರಿಯನ್ನೂ ಕೂಡ ಸಂಪರ್ಕ ಮಾಡಿದ್ದಾರೆ.ಪ್ರಸ್ತುತ ಇರುವ ಸಫಾರಿ ದರದ ಜೊತೆಗೆ 5 ರೂ ಟಿಕೆಟ್ ದರ ಹೆಚ್ಚಿಸಿ ಇನ್ಶುರೆನ್ಸ್ ಮಾಡಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

ಪ್ರವಾಸಿಗರು ದುಬಾರಿ ವೆಚ್ಚ ತೆತ್ತು ಸಫಾರಿಗೆ ಹೋಗ್ತಾರೆ.ಈ ವೇಳೆ ಕಾಡಿನಲ್ಲಿ ವನ್ಯ ಪ್ರಾಣಿಗಳ ದರ್ಶನ ಹಾಗೂ ಪ್ರಾಕೃತಿಕ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ತಾರೆ.ಇಂತಾ ವೇಳೆ ಕಾಡಾನೆ ಅಟ್ಟಿಸಿಕೊಂಡು ಬರೋದು ಅಥವಾ ಇನ್ನಿತರ ವನ್ಯ ಪ್ರಾಣಿಗಳು ಕೂಡ ಸಫಾರಿ ವಾಹನದ ಮೇಲೆ ದಾಳಿ ನಡೆಸಿದ ನಿದರ್ಶನ ಸಾಕಷ್ಟಿದೆ.

ಈ ಹಿನ್ನೆಲೆ ಸಫಾರಿಗೆ ಹೋದ ವೇಳೆ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸುವ ಜೊತೆಗೆ ಪ್ರವಾಸಿಗರ ಹಿತರಕ್ಷಣೆ ದೃಷ್ಟಿಯಿಂದ ಇನ್ಶುರೆನ್ಸ್ ಪ್ಲಾನ್ ನಲ್ಲಿದೆ.ಅಲ್ಲದೇ ಈಗಾಗ್ಲೇ ಕಳ್ಳರ ಬೇಟೆ ಶಿಬಿರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಕೂಡ ಇನ್ಶುರೆನ್ಸ್ ಮಾಡಿಸಿ,ಸೌಲಭ್ಯ ಒದಗಿಸಲಾಗಿದೆ.

ಒಟ್ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ 50 ರ ಸಂಭ್ರಮದಲ್ಲಿದೆ.ಈಗಾಗ್ಲೇ ವನ್ಯ ಸಂಪತ್ತು ವೃದ್ದಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ರೂಪಿಸಿವೆ.ಆ ನಿಟ್ಟಿನಲ್ಲಿ ಇದೀಗ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಇನ್ಶುರೆನ್ಸ್ ಮಾಡಿಸಲು ಒಂದೊಳ್ಳೆ ಹೆಜ್ಜೆ ಇಟ್ಟಿದೆ.ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ? ಅಥವಾ ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.

ತಾಜಾ ಸುದ್ದಿ

Leave A Reply

Your email address will not be published.