EBM News Kannada
Leading News Portal in Kannada

ಚಿಕ್ಕಬಳ್ಳಾಪುರ: ಕನಸು ಈಡೇರುವ ಮುನ್ನ ವಿಧಿಯಾಟಕ್ಕೆ ಬಲಿಯಾದ ಪತಿಯ ನೆನೆದು ಕಣ್ಣೀರಿಟ್ಟ ನಂದಿ ಗ್ರಾಮ ಪಂ. ನೂತನ ಅಧ್ಯಕ್ಷೆ – Kannada News | Chikkaballapur Nandi gram panchayat president breaks down in tears after remembering her husband who died in an accident

0


ತನ್ನ ಪತ್ನಿಯನ್ನು ನಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನಾಗಿಸುವ ಕನಸು ಕಂಡಿದ್ದ ಶ್ರೀನಿವಾಸ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದೀಗ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮೃತನ ಪತ್ನಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ನಂದಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಾಲಿನಿ

ಚಿಕ್ಕಬಳ್ಳಾಪುರ, ಆಗಸ್ಟ್ 8: ತಾಲೂಕಿನ ನಂದಿ ಗ್ರಾಮ ಪಂಚಾಯತ್ (Nandi Gram Panchayat) ಸದಸ್ಯೆಯಾಗಿದ್ದ ಮಹಿಳೆಯೊಬ್ಬರು ತನ್ನ ಪತಿಯ ಕನಸು ಈಡೇರಿಸಲು ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಕನಸು ಈಡೇರುವ ಮುನ್ನವೇ ಮಹಿಳೆಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೀಗ, ಮೃತನ ಪತ್ನಿ ಪಂಚಾಯತ್ ಅಧ್ಯಕ್ಷೆಯಾಗಿಯೂ ನೇಮಕಗೊಂಡಿದ್ದಾರೆ. ಆದರೆ ಇಂದು ನನ್ನ ಪತಿ ಇರುತ್ತಿದ್ದರೆ ಸಂತೋಷ ಪಡುತ್ತಿದ್ದರು, ಆದರೆ ಇಂದು ಅವರೇ ಇಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮ ಪಂಚಾಯತಿಯಲ್ಲಿ ಇಂದು ಅದ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವದಿಯ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ನಂದಿ ಗ್ರಾಮ ಪಂಚಾಯತಿಯ ಸದಸ್ಯೆಯಾಗಿದ್ದ ಮಾಲಿನಿ ಶ್ರೀನಿವಾಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಅದರಂತೆ ಅಧ್ಯಕ್ಷೆಯಾಗಿಯೂ ಚುನಾಯಿತರಾಗಿದ್ದಾರೆ.

ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಮಾಲಿನಿ ಅವರು ತಮ್ಮ ಅಭಿಮಾನಿಗಳು ಮತ್ತು ಮುಖಂಡರೊಂದಿಗೆ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಅವರು, ತಾನು ನಂದಿ ಗ್ರಾಮ ಪಂಚಾಯತಿಯಲ್ಲಿ ಒಮ್ಮೆಯಾದರೂ ಅಧ್ಯಕ್ಷೆಯಾಗಬೇಕು ಅಂತ ತನ್ನ ಪತಿ ಶ್ರೀನಿವಾಸ್ ಬಯಸಿದ್ದರು. ಆದರೆ ಅವರು ಬದುಕಿದ್ದಾಗ ಅವರ ಕನಸು ಈಡೇರಲಿಲ್ಲ, ಈಗ ಈಡೇರಿದೆ. ಆದರೆ ಸಂತೋಷ ಪಡಲು ಅವರೇ ಇಲ್ಲ. ಅದಾಗ್ಯೂ, ಈಗ ಅವರ ಆತ್ಮಕ್ಕೆ ಈಗಲಾದರೂ ಶಾಂತಿ ಸಿಕ್ಕಿದೆ ಎಂದು ಕಣ್ಣೀರಿಟ್ಟರು.

ಮುಂದಿನ ದಿನಗಳಲ್ಲಿ ನಂದಿ ಪಂಚಾಯತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಯನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಹಾಗೂ ಮಾದರಿ ಕೆಲಸ ಮಾಡುವುದಾಗಿ ಪಂಚಾಯತ್ ನೂತನ ಅಧ್ಯಕ್ಷೆ ಹೇಳಿದರು.

ತಾಜಾ ಸುದ್ದಿ

Leave A Reply

Your email address will not be published.