EBM News Kannada
Leading News Portal in Kannada

ಬೆಂಗಳೂರು ಗ್ರಾಮಾಂತರ: ಡಿಪೋದಲ್ಲಿ ನೇಣು ಬಿಗಿದುಕೊಂಡು ಬಿಎಂಟಿಸಿ ಡ್ರೈವರ್​ ಕಂ ಕಂಡಕ್ಟರ್​ ಆತ್ಮಹತ್ಯೆ – Kannada News | BMTC Driver Co Conductor committed suicide by hanging himself at Devanahalli depot

0


ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೇವನಹಳ್ಳಿ ಪಟ್ಟಣದ ಬಿಎಂಟಿಸಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ‌ ಆವತಿ ಮೂಲದ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ಚಾಲಕ.

ಬೆಂಗಳೂರು ಗ್ರಾಮಾಂತರ, ಆ.8: ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ (KSRTC) ಚಾಲಕ ಜಗದೀಶ್​​ ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಂತೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೇವನಹಳ್ಳಿ(Devanahalli) ಪಟ್ಟಣದ ಬಿಎಂಟಿಸಿ(BMTC) ಡಿಪೋದಲ್ಲಿ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ‌ ಆವತಿ ಮೂಲದ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ಚಾಲಕ. ಇತ ಚಾಲಕ‌ ಕಂ ನಿರ್ವಾಹಕನಾಗಿ‌ ಕೆಲಸ ಮಾಡುತ್ತಿದ್ದ. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ನಾಗೇಶ್. ಕಳೆದ ಮಧ್ಯರಾತ್ರಿ ಡಿಪೋಗೆ ಬಂದು ಡಿಪೋ ಮ್ಯಾನೇಜರ್ ಕೊಠಡಿ ಎದುರೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗ್ಗೆ ಸಿಬ್ಬಂದಿಗಳು ನೋಡಿ, ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಮನೆಯಲ್ಲಿ ಕೆಲಸ ಮಾಡುತಿದ್ದ ವ್ಯಕ್ತಿ, ಅಪಘಾತದಲ್ಲಿ ಸಾವು

ಬೆಂಗಳೂರು: ದ್ವಿಚಕ್ರ ವಾಹನವೊಂದು ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಶವಂತಪುರ ಬಳಿ ನಡೆದಿದೆ. ತ್ರಿಪುರ ಮೂಲದ ಬಿಜ್ಜು ಸೆಲ್ಫ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿ. ಇತ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯರ್ ಮನೆಯಲ್ಲಿ ಕೆಲಸ ಮಾಡುತಿದ್ದ. ಸಂಬಂಧಿ‌ಯೊಬ್ಬನನ್ನು ಡ್ರಾಪ್ ಮಾಡಿ, ಯಶವಂತಪುರದಿಂದ ಮಲ್ಲೇಶ್ವರಂನ ಅನೂಪ್ ಅಯ್ಯರ್ ಮನೆಗೆ ಬರುತಿದ್ದ ವೇಳೆ ಅಪಘಾತವಾಗಿದೆ. ಮೃತ ದೇಹವನ್ನು ಪೊಲೀಸರು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದು, ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಲಾರಿ

ಚಿಕ್ಕಬಳ್ಳಾಫುರ: ರಾಷ್ಟ್ರೀಯ ಹೆದ್ದಾರಿ 44 ರ ರಸ್ತೆ ಬದಿ ನೋಡ ನೋಡುತ್ತಿದ್ದಂತೆ ಲಾರಿಯೊಂದು ಹೊತ್ತಿ ಉರಿದಿದೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಮಂಚನಬಲೆ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಸುದ್ದಿ

Leave A Reply

Your email address will not be published.