EBM News Kannada
Leading News Portal in Kannada

ಬೆಂಗಳೂರು ಟ್ರಾಫಿಕ್​ ಸಮಸ್ಯೆ ನಿವಾರಣೆಗೆ ಹೊಸ ಪ್ಲ್ಯಾನ್​, ಟನಲ್ ನಿರ್ಮಾಣಕ್ಕೆ ನಿರ್ಧಾರ: ಡಿಸಿಎಂ ಡಿಕೆ ಶಿವಕುಮಾರ್ – Kannada News | DCM DK Shivakumar has decided to construct a new plan and tunnels to solve traffic problems in the Bengaluru

0


Bengaluru News: ರಾಜ್ಯ ರಾಜಧಾನಿ, ಸಿಲಿಕಾನ್​ ಸಿಟಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್​ ಸಮಸ್ಯೆ ಬಗೆಹರಿಸಬೇಕಿದೆ. ಆದ್ದರಿಂದ ಟನಲ್ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇವೆ. ಸದ್ಯದಲ್ಲೇ ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲಿದ್ದೇವೆ. ಆಸಕ್ತಿಯಿರುವವರು ಟೆಂಡರ್​​ನಲ್ಲಿ ಭಾಗಿಯಾಗಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು, ಆಗಸ್ಟ್​ 07: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಟ್ರಾಫಿಕ್​ ಸಮಸ್ಯೆ ಬಗೆಹರಿಸಬೇಕಿದೆ. ಆದ್ದರಿಂದ ಟನಲ್ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar​) ಹೇಳಿದ್ದಾರೆ. ನಗರದ ಸಿಎಂ ಸಿದ್ಧರಾಮಯ್ಯ ಗೃಹಕಚೇರಿ ಕೃಷ್ಣಾ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟನಲ್ ನಿರ್ಮಾಣ ಮೂಲಕ ಟ್ರಾಫಿಕ್ ಪ್ರಮಾಣ ಇಳಿಕೆಗೆ ಕ್ರಮ ಕೈಗೊಳ್ಳಲಾಗುವುದು. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲಿದ್ದೇವೆ. ಆಸಕ್ತಿಯಿರುವವರು ಟೆಂಡರ್​​ನಲ್ಲಿ ಭಾಗಿಯಾಗಬಹುದು ಎಂದು ಹೇಳಿದ್ದಾರೆ.

ಬಿಬಿಎಂಪಿ ಅಕ್ರಮಗಳ ತನಿಖೆ: ನಾನು ಎಸ್​ಐಟಿ ರಚನೆ ಮಾಡಿಲ್ಲ

ಬಿಬಿಎಂಪಿ ಅಕ್ರಮಗಳ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಎಸ್​ಐಟಿ ರಚನೆ ಮಾಡಿಲ್ಲ. ಈಗ ಕೆಲವೊಂದು ಕೆಲಸಗಳು ಬೆಂಗಳೂರಿನಲ್ಲಿ ಆಗಿವೆ. ಯಾವ ಕೆಲಸ, ಯಾವಾಗ ಟೆಂಡರ್ ಆಯ್ತು, ಯಾರು ಟೆಂಡರ್ ಕರೆದಿದ್ದರು ಹೀಗಿ ಸಾಕಷ್ಟು ಗೊಂದಲಗಳಿವೆ.

ಕೇವಲ ಮೂರು ದಿನಗಳ ಹಿಂದೆ ಟೆಂಡರ್​ ಕರೆದು ಪಾಸ್​​ ಮಾಡಲಾಗಿದೆ. ಎರಡು ಕೋಟಿ ಕೆಲಸಕ್ಕೆ 1.99 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. 1 ಲಕ್ಷ ರೂ. ಮಾತ್ರ ಪೆಂಡಿಂಗ್ ಇಟ್ಟಿದ್ದಾರೆ. ಈ ತರಹ 25 ಕೇಸ್ ಇದ್ದಾವೆ. ಯಾಕೆ ಹೀಗೆ ಇಡಬೇಕು ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿ ಅವಧಿಯಲ್ಲಿನ ಕಾಮಗಾರಿ ಬಾಕಿ ಇದೆ

ರಾಜ್ಯದ ಕೆಲ ಜಿಲ್ಲೆಗಳ ಬಗ್ಗೆ ಪ್ರತಿ ಕ್ಷೇತ್ರದ ಬಗ್ಗೆ ಚರ್ಚಿಸುತ್ತಿದ್ದೇವೆ. ಶಾಸಕರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ, ಮಾರ್ಗದರ್ಶನ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಏನೆಲ್ಲಾ ಆಗಬೇಕು ಅಂತ ಮಾರ್ಗದರ್ಶನ ಮಾಡಬೇಕಿದೆ. ಹೀಗಾಗಿ ಸತತ 1 ವಾರಗಳ ಕಾಲ ಸಭೆ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತು ಕೊಟ್ಟಿದ್ದೆವು. ಹಾಗಾಗಿ ಮೊದಲು ಶಾಸಕರ ಜೊತೆ ಸಭೆ ಕರೆದಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಅವಧಿಯಲ್ಲಿನ ಕಾಮಗಾರಿ ಬಾಕಿ ಇದೆ. ಪ್ರತಿ ವಾರ್ಡ್​​ನಲ್ಲಿ ಕಾಮಗಾರಿ ನಡೆದಿದೆ, ಅದರಂತೆ ತನಿಖೆ ನಡೆಯಲಿದೆ ಎಂದು ಹೇಳಿದರು.

ಶಾಸಕ ಸುರೇಶ್‌ ಕುಮಾರ್‌ಗೆ ಡಿ.ಕೆ.ಶಿವಕುಮಾರ್ ತಿರುಗೇಟು

ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಕ್ಕೆ ಆಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಮಾಜಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಕೇಸ್​ ಇರಲಿಲ್ವಾ? ಬಾರ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ಬಿಎಸ್​ವೈ ಭಾಗಿಯಾಗಿರಲಿಲ್ವಾ? ನಾನು ಯಾರಿಗೂ ಮುಜುಗರ ಮಾಡುತ್ತಿಲ್ಲ ಎಂದು ​​ಪತ್ರ ಬರೆದ ಶಾಸಕ ಸುರೇಶ್‌ ಕುಮಾರ್‌ಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.