EBM News Kannada
Leading News Portal in Kannada

ಯಾದಗಿರಿ: ಭತ್ತ ನಾಟಿ ಮಾಡಲು ಹೋಗಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು – Kannada News | Yadgir News: Boy dies after touching electric wire

0


Yadgir News: ಯಾದಗಿರಿ ತಾಲೂಕಿನ ಯರಗೋಳ ಸಮೀಪದ ಅಡಮಡಿ ತಾಂಡಾದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಈ ಕುರಿತಾಗಿ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡಿದ ಕಳ್ಳನನ್ನು ಥಳಿಸಿ ಪ್ರಯಾಣಿಕರು ಪೊಲೀಸರಿಗೆ ಒಪ್ಪಿಸಿರುವಂತಹ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಮೃತ ಬಾಲಕ ಕಾಶಿನಾಥ್ ಚೌಹಾಣ್‌

ಯಾದಗಿರಿ, ಆಗಸ್ಟ್​ 07: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿರುವಂತಹ (dies) ಘಟನೆ ಯಾದಗಿರಿ ತಾಲೂಕಿನ ಯರಗೋಳ ಸಮೀಪದ ಅಡಮಡಿ ತಾಂಡಾದಲ್ಲಿ ನಡೆದಿದೆ. ಮನೆ ಮುಂಭಾಗದಲ್ಲಿರುವ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಹೋದಾಗ ಅವಘಡ ಸಂಭವಿಸಿದೆ. ಕಾಶಿನಾಥ್ ಚೌಹಾಣ್ (14) ಮೃತ ಬಾಲಕ. ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಕಳ್ಳನನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ ಪ್ರಯಾಣಿಕರು

ಚಿಕ್ಕಬಳ್ಳಾಪುರ: ನಗರದ ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ಮೊಬೈಲ್ ಕಳ್ಳನನ್ನು ಥಳಿಸಿ ಪ್ರಯಾಣಿಕರು ಪೊಲೀಸರ ವಶಕ್ಕೆ ನೀಡಿರುವಂತಹ ಘಟನೆ ನಡೆದಿದೆ. ಬಸ್ ಹತ್ತುವ ವೇಳೆ ಈಶ್ವರ್ ರೆಡ್ಡಿ ಎಂಬುವರ ಒಂದೂವರೆ ಲಕ್ಷ ರೂ. ಮೌಲ್ಯದ ಐಫೋನ್​ ಅನ್ನು ಕಳ್ಳತನ ಮಾಡಿ, ಪರಾರಿಯಾಗುತ್ತಿದ್ದ ಕಳ್ಳನನ್ನು ಪ್ರಯಾಣಿಕರು ಹಿಡಿದಿದ್ದಾರೆ. ಸದ್ಯ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ್ದಾರೆ.

ಸಾಲಕ್ಕೆ ಹೆದರಿ ಯುವಕ ಆತ್ಮಹತ್ಯೆಗೆ ಶರಣು

ನೆಲಮಂಗಲ: ಸಾಲಕ್ಕೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಮಲ್ಲಸಂದ್ರದಲ್ಲಿ ದಿಲೀಪ್(30) ಆತ್ಮಹತ್ಯೆ ಮಾಡಿಕೊಂಡು ಯುವಕ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಮೃತ ದಿಲೀಪ್ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ.

ಆಷಾಢ ಮಾಸ ಹಿನ್ನೆಲೆ ಕ್ಯಾಟರಿಂಗ್ ಆರ್ಡರ್ ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆಗಾಗಿ 2 ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲ ಕೊಟ್ಟವರು ಹಣ ವಾಪಸ್ ಕೇಳಿದ್ದಕ್ಕೆ ಆತ್ಮಹತ್ಯೆ ಆರೋಪ ಕೇಳಿಬಂದಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

ಜಗಳ ಬಿಡಿಸಲು ಬಂದ ವೃದ್ಧೆಯ ಕೊಲೆ

ರಾಮನಗರ: ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿಯಲ್ಲಿ ಜಗಳ ಬಿಡಿಸಲು ಬಂದ ವೃದ್ಧೆ ಕೊಲೆ ಆಗಿರುವಂತಹ ಘಟನೆ ನಡೆದಿದೆ. ಶಿವಲಿಂಗಮ್ಮ‌(80)‌ ಮೃತ ದುರ್ದೈವಿ. ವೃದ್ಧೆ ಎದೆಗೆ ಒದ್ದು ಅದೇ ಗ್ರಾಮದ ‌ಮಂಜು ಕೊಲೆಗೈದ ಆರೋಪ ಕೇಳಿಬಂದಿದೆ.

ಸಾಲಗಾರರಿಗೆ ಮನೆ ತೋರಿಸಿದ್ದಕ್ಕೆ ಸಿಟ್ಟಾಗಿದ್ದ ಮಂಜು, ತನ್ನ ಮನೆಗೆ ಸಾಲಗಾರರನ್ನು ಕಳುಹಿಸಿದ್ದಾಳೆ ಅಂತ ಮನೆಗೆ ನುಗ್ಗಿ ಸದಸ್ಯರ ಮೇಲೆ ಹಲ್ಲೆ ಮಾಡಲಾಗಿದೆ. ಸೊಸೆ, ಮಕ್ಕಳ ಮೇಲಿನ ಹಲ್ಲೆ ತಡೆಯಲು ಬಂದಿದ್ದ ಶಿವಲಿಂಗಮ್ಮ, ಈ ವೇಳೆ ಎದೆಗೆ ಗುದ್ದಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ತಾಜಾ ಸುದ್ದಿ

Leave A Reply

Your email address will not be published.