ಶಿವಮೊಗ್ಗ ನಗರದಲ್ಲಿ ಕರಾಟೆ ಕಲರವ, ಗಮನ ಸೆಳೆದ ಕರಾಟೆ ಫೈಟ್- 4ನೇ ಅಂತರಾಷ್ಟ್ರೀಯ ಶಿವಮೊಗ್ಗ ಓಪನ್ ಕರಾಟೆ – Kannada News | 4th World Shivamogga Open Karate Competition attracted huge crowd
4th World Shivamogga Open Karate Competition: ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಕರಾಟೆ ಪಂದ್ಯಾವಳಿಗಳು ಎಲ್ಲರ ಗಮನ ಸೆಳೆದಿದ್ದವು. ಪೋಷಕರು ತಮ್ಮ ಮಕ್ಕಳ ಕರಾಟೆ ನೋಡಿ ಸಖತ್ ಎಂಜಾಯ್ ಮಾಡಿದರು.
ಶಿವಮೊಗ್ಗ ನಗರದಲ್ಲಿ ಕರಾಟೆ ಕಲರವ
ಶಿವಮೊಗ್ಗದ ನೆಹರು ಒಳಕ್ರೀಡಾಂಗಣದಲ್ಲಿ ಎಲ್ಲಿ ನೋಡಿದ್ರೂ ಬಿಳಿಯ ಸಮವಸ್ತ್ರದ್ದೇ ಕಾರುಬಾರು. ಪುಟ್ಟ ಮಕ್ಕಳಿಂದ ದೊಡ್ಡವರು ಎಲ್ಲರೂ ಬಿಳಿ ಸಮವಸ್ತ್ರ ಧರಿಸಿದ್ದರು. ಎಲ್ಲರೂ ಕ್ರೀಡಾಂಗಣದೊಳಗೆ ಬಿಳಿ ಸಮಸ್ತ್ರ ಧರಿಸಿದ ಕ್ರೀಡಾಪಟುಗಳು ಬೆವರು ಸುರಿಸುತ್ತಿದ್ದಾರೆ. ದೇಶದ ವಿವಿಧ ರಾಜ್ಯ ಮತ್ತು ಹೊರ ದೇಶಗಳಿಂದ ಬಂದಿರುವ ಕರಾಟೆ ಪಟುಗಳು ಕಸರತ್ತು ಹೇಗಿಲ್ಲಾ ಇತ್ತು ಅಂತೀರಾ ಈ ಸ್ಟೋರಿ ನೋಡಿ… ಶಿವಮೊಗ್ಗ ನೆಹರು ಒಳಕ್ರೀಡಾಂಗಣದಲ್ಲಿ ಶನಿವಾರ-ಭಾನುವಾರ ಎರಡು ದಿನಗಳ ಕಾಲ ಅಂತರಾಷ್ಟ್ರೀಯ 4ನೇಯ ಮಟ್ಟದ ಶಿವಮೊಗ್ಗ ಓಪನ್ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಮತ್ತು ಶಿವಮೊಗ್ಗ ನಗರ ಕರಾಟೆ ಸಂಸ್ಥೆ ಜಂಟಿಯಾಗಿ (Shivamogga Karate) ಈ ಸ್ಪರ್ಧೆಯನ್ನು ಆಯೋಜನ ಮಾಡಿದ್ದವು. ಪಂಜಾಬ್, ತಮಿಳುನಾಡು, ತೆಲಂಗಾಣ, ಗೋವಾ, ಮಹಾರಾಷ್ಟ್ರ ವಿವಿಧ ರಾಜ್ಯಗಳಿಂದ, ಶ್ರೀಲಂಕಾ ಮತ್ತು ನೇಪಾಳ ವಿದೇಶದಿಂದ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಮಂಡ್ಯ,ಹಾಸನ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಒಟ್ಟು 1200ಕ್ಕೂ ಹೆಚ್ಚು ಕರಾಟೆ ಕ್ರೀಡಾಪಟುಗಳು (World Karate) ಭಾಗವಹಿಸಿದ್ದು ವಿಶೇಷವಾಗಿತ್ತು. ಶಿವಮೊಗ್ಗದಲ್ಲಿ 4ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಷಿಪ್ (4th World Shivamogga Open Karate Competition)ಪಂದ್ಯಾವಳಿಗಳು ಮಲೆನಾಡಿನಗರ ಗಮನ ಸೆಳೆದಿತ್ತು. ಪುಟ್ಟ ಪುಟ್ಟ ಮಕ್ಕಳಿನಿಂದ ಹಿರಿಯ ವಯಸ್ಸಿನವರು ಉತ್ಸಾಹದಿಂದ ಮಾರ್ಷಲ್ ಆರ್ಟ್ ಕರಾಟೆಯಲ್ಲಿ ಭಾಗವಹಿಸಿದ್ದರು.
ಕರಾಟೆ ಅಂದ್ರೆ ರೋಮಾಂಚನ. ಸೆಲ್ಪ್ ಡಿಫೆನ್ಸ್ ಗಾಗಿ ಕರಾಟೆ ಪಟುಗಳು ನಿರಂತರ ಪರಿಶ್ರಮದಿಂದ ಆ ಕಲೆಯನ್ನು ರೂಡಿಸಿಕೊಂಡಿರುತ್ತಾರೆ. ಈ ಕರಾಟೆ ಚಾಂಪಿಯನ್ಸ್ ಪಂದ್ಯಗಳನ್ನು ನೋಡುವುದಕ್ಕೆ ಜನರು ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು. ಎರಡು ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಕರಾಟೆ ಪಂದ್ಯಾವಳಿಗಳು ಎಲ್ಲರ ಗಮನ ಸೆಳೆದಿದ್ದವು. ಪೋಷಕರು ತಮ್ಮ ಮಕ್ಕಳ ಕರಾಟೆ ನೋಡಿ ಸಖತ್ ಎಂಜಾಯ್ ಮಾಡಿದರು. ವಿವಿಧ ದೇಶ ಮತ್ತು ರಾಜ್ಯದಿಂದ ಬಂದಿದ್ದ ಕರಾಟೆ ಗಳು ತಮ್ಮ ವಿಭಿನ್ನ ಶೈಲಿಯ ಕರಾಟೆಯಿಂದ ಪ್ರೇಕ್ಷಕರ ಮನಗೆದ್ದರು. ಕರಾಟೆಗೆ 12 ಅಖಾಡ, 48 ರೆಫರಿಗಳ ಸಮ್ಮುಖದಲ್ಲಿ ಪಂದ್ಯಾಟಗಳು ನಡೆದಿದ್ದವು.
ಕರಾಟೆ ಕೊರ್ಟ್ ನಲ್ಲಿ ನಾಲ್ಕು ವರ್ಷದಿಂದ 40 ವರ್ಷದ ವಯೋಮಿತಿಯ ಮಕ್ಕಳು, ಬಾಲಕಿಯರು, ಬಾಲಕರು ಮತ್ತು ಯುವಕ ಮತ್ತು ಯುವತಿಯರು ಭಾಗವಹಿಸಿದ್ದರು. ಮೊದಲ ದಿನ ಕಟಾಸ್ ನ ಸ್ಪರ್ಧೆಯಿತ್ತು. ಹಗಲು ರಾತ್ರಿ ಕಷ್ಟಪಟ್ಟು, ಬೆವರು ಸುರಿಸಿ ಕರಾಟೆ ಕ್ರೀಡಾಪಟುಗಳು ವೈಟ್ ಬೆಲ್ಟ್, ಆರೆಂಜ್ ಬೆಲ್ಟ್ , ಗ್ರೀನ್ ಬೆಲ್ಟ್, ಬ್ಲೂ ವಟ್, ಪರ್ಪಲ್ ಬೆಲ್ಟ್, ಬ್ರೌ ನ್ ಬೆಲ್ಟ್ , ಬ್ಲ್ಯಾಕ್ ಬೆಲ್ಟ್ ಪಡೆದಿರುತ್ತಾರೆ. ಹೀಗೆ ಅವರು ಕಲಿತಿರುವ ಕರಾಟೆ ವಿದ್ಯೆಯನ್ನು ಈ ಸ್ಪರ್ಧೆಯ ಮೂಲಕ ಹೊರಹಾಕಿದರು.
ಕರಾಟೆ ಅಂದ್ರೆ ಅದೊಂದು ಸಾಹಸ ಕ್ರೀಡೆಯಾಗಿದೆ. ಕೈ ಮತ್ತು ಕಾಲುಗಳ ಮೂಲಕ ತಮ್ಮ ಶಕ್ತಿ ಮತ್ತು ಯುಕ್ತಿಯನ್ನ ತೋರಿಸಬೇಕು. ಯಾರೆಲ್ಲ ನಿರಂತರ ಅಭ್ಯಾಸ ಮತ್ತು ಚಾಣಾಕ್ಷತನದಿಂದ ಕೂಡಿರುತ್ತಾರೋ ಅವರು ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯ. ಸುಮಾರು 1200 ಕ್ಕೂ ಹೆಚ್ಚು ಸ್ಪರ್ಧಾಳುಗಳು ತಮ್ಮಲ್ಲಿರುವ ಕೌಶಲ್ಯವನ್ನು ಹೊರಹಾಕಿದರು. ಸ್ಪರ್ಧೆಯಲ್ಲಿ ಅವರ ಪಂಚ್ ಮತ್ತು ಕಿಕ್ ಗಳನ್ನು ಪ್ರೇಕ್ಷಕರನ್ನು ಚಪ್ಪಾಳೆ ತಟ್ಟುವಂತೆ ಮಾಡುತ್ತಿದ್ದವು.
ಕರಾಟೆ ಸ್ಪರ್ಧೆಯಲ್ಲಿ ಹೆಚ್ಚು ಬಾಲಕಿಯರು ಮತ್ತು ಯುವತಿಯರು ಕಂಡು ಬಂದಿದ್ದು ಮತ್ತೊಂದು ವಿಶೇಷವಾಗಿತ್ತು. ಇತ್ತೀಚೆಗೆ ಆತ್ಮರಕ್ಷಣೆಗೆ ಬಹುತೇಕರು ಕರಾಟೆಯನ್ನು ಕಲಿಯುತ್ತಿದ್ದಾರೆ. ಶಾಲಾ ಕಾಲೇಜ್ ವಿದ್ಯಾರ್ಥಿಗಳು ಕರಾಟೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ನೆಹರು ಒಳಕ್ರೀಡಾಂಗದಲ್ಲಿ ಕಟಾಸ್ ಕರಾಟೆಯ ವಿವಿಧ ಆಯಾಮಗಳು. ಕೈ ಮತ್ತು ಕಾಲು ಎರಡನ್ನು ಬಳಿಕೆಯಿಂದ ವಿವಿಧ ರಕ್ಷಣೆ ಮತ್ತು ಎದುರಾಳಿ ವಿರುದ್ಧ ಅಟ್ಯಾಕ್ ಮಾಡುವ ಕೌಶಲ್ಯಗಳಾಗಿವೆ.
ಇದರಲ್ಲಿ ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾದ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರು ಮತ್ತು ಪೋಷಕರ ಗಮನ ಸೆಳೆದರು. ಕರಾಟೆ ಫೈಟ್ ಗಳು ಪ್ರೇಕ್ಷರನ್ನು ಮನರಂಜಿಸಿದವು. ದಕ್ಷಿಣ ಭಾರತದ ದೊಡ್ಡ ಪಂದ್ಯಾವಳಿಗೆ ಇದಾಗಿತ್ತು. ಈ ಪಂದ್ಯಾವಳಿಗೆ ವಿಶೇಷ ಅತಿಥಿಯಾಗಿ ಅಮೆರಿಕದಿಂದ ಗ್ರ್ಯಾಂಡ್ ಮಾಸ್ಟರ್ ಪೆರಿಯಫ್ ಮೌಲೆ ಬಂದಿದ್ದರು. ಪಂದ್ಯಾವಳಿಯಲ್ಲಿ ಗೆದ್ದ ಕರಾಟೆ ಪಟುಗಳಿಗೆ ಬಹುಮಾನ ನೀಡಿ ಗೌರವಿಸುತ್ತಿದ್ದರು. ಬಹುಮಾನ ಪಡೆದ ಕರಾಟೆ ಪಟುಗಳಿಗೆ ಎಲ್ಲಿಲ್ಲದ ಸಂತಸ.
ಶಿವಮೊಗ್ಗ ನಗರದಲ್ಲಿ ನಡೆದ ಈ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗಳು ಮಲೆನಾಡಿಗರಿಗೆ ಹೊಸ ಅನುಭವ ನೀಡಿದವು. ದೊಡ್ಡ ಮಟ್ಟದ ಕರಾಟೆ ಪಂದ್ಯಾವಳಿಗಳಲ್ಲಿ ಜಿಲ್ಲೆ ಮತ್ತು ರಾಜ್ಯದ ಕರಾಟೆ ಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಹೊರಹಾಕಿದರು.. ಈ ಪಂದ್ಯಾವಳಿಯ ಮೂಲಕ ಹೊಸ ಹೊಸ ಕರಾಟೆ ಪಟುಗಳು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದರು.