EBM News Kannada
Leading News Portal in Kannada

ಒಣದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹ: ರೈತರ ಹೋರಾಟಕ್ಕೆ ಮಠಾಧೀಶರ ಸಾಥ್ – Kannada News | Vijayapura News: Govt demands support price for Dry Grapes: Seer joins farmers’ protest

0


Vijayapura News: ಒಣ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದ ಕಾರಣ ದ್ರಾಕ್ಷಿ ಬೆಳೆಗಾರರು ಹೋರಾಟದ ಹಾದಿ ಹಿಡಿದಿದ್ದಾರೆ. ದ್ರಾಕ್ಷಿ ಬೆಳೆಗಾರರ ಸಮಸ್ಯೆ ಅರಿತ ಮಠಾಧೀಶರು ಸಹಿತ ರೈತರಿಗೆ ಬೆಂಬಲ ನೀಡಿ ನಿನ್ನೆ ವಿಜಯಪುರ ನಗರದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಲಯದಲ್ಲಿ ಚಿಂತನ ಸಭೆ ನಡೆಸಿದರು.

ಡಿಸಿ ಕಚೇರಿಗೆ ಮನವಿ ಸಲ್ಲಿಸಿದ ಮಠಾಧೀಶರು.

ವಿಜಯಪುರ, ಆಗಸ್ಟ್​06: ರಾಜ್ಯದಲ್ಲೇ ಹೆಚ್ಚಾಗಿ ದ್ರಾಕ್ಷಿ (Grapes) ಬೆಳೆಯುವ ಜಿಲ್ಲೆ ಅಂದರೆ ಅದು ವಿಜಯಪುರ. ಈ ಜಿಲ್ಲೆ ದ್ರಾಕ್ಷಿಯ ಕಣಜ ಎಂದೇ ಪ್ರಸಿದ್ಧಿಯಾಗಿದೆ. ಆದರೆ ಈ ವರ್ಷ ಒಣದ್ರಾಕ್ಷಿ ದರ ಪಾತಾಳಕ್ಕೆ ಕುಸಿದಿದ್ದು, ದ್ರಾಕ್ಷಿ ಬೆಳೆಗಾರರು ಸಂಕಷ್ಟ ಸಿಲುಕಿದ್ದಾರೆ. ಒಣದ್ರಾಕ್ಷಿಗೆ ‌ಸರ್ಕರ ಬೆಂಬಲ ಬೆಲೆ ಘೋಷಿಸುವಂತೆ ರೈತರ (farmers) ಕೂಗಿದೆ. ಈಗ ರೈತರ ಹೋರಾಟಕ್ಕೆ ಮಠಾಧೀಶರು ಸಾಥ್ ನೀಡಿದ್ದಾರೆ. ದ್ರಾಕ್ಷಿ ಬೆಳೆದ ರೈತರಿಗೆ ಮತ್ತಷ್ಟು ಆನೆ ಬಲ ಬಂದಂತಾಗಿದೆ.

ಒಣ ದ್ರಾಕ್ಷಿಗೆ ಸೂಕ್ತ ಬೆಲೆ ಸಿಗದ ಕಾರಣ ದ್ರಾಕ್ಷಿ ಬೆಳೆಗಾರರು ಹೋರಾಟದ ಹಾದಿ ಹಿಡಿದಿದ್ದಾರೆ. ದ್ರಾಕ್ಷಿ ಬೆಳೆಗಾರರ ಸಮಸ್ಯೆ ಅರಿತ ಮಠಾಧೀಶರು ಸಹಿತ ರೈತರಿಗೆ ಬೆಂಬಲ ನೀಡಿ ನಿನ್ನೆ ವಿಜಯಪುರ ನಗರದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಲಯದಲ್ಲಿ ಚಿಂತನ ಸಭೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಕೆಜಿಗೆ ಕನಿಷ್ಠ 150 ರಿಂದ 250 ರೂಪಾಯಿಗಳವರೆಗೆ ಬೆಂಬಲ ಬೆಲೆ ನೀಡಿ ನೇರವಾಗಿ ಖರೀದಿಸಬೇಕು. ನಾಡಿನ ರೈತರು ಪ್ರತಿ ವರ್ಷ ಒಂದಿಲ್ಲ ಒಂದು ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ.

ದ್ರಾಕ್ಷಿ ಬೆಳೆದ ರೈತರ ಪರಿಸ್ಥಿತಿ ಹೇಳ ತೀರದಂತಾಗಿದೆ. ಒಣ ದ್ರಾಕ್ಷಿ ಮಾನವಕುಲಕ್ಕೆ ಅತ್ಯಂತ ಸಹಕಾರಿಯಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ಹಾಗೂ ಜನಸಾಮಾನ್ಯರಿಗೆ 20ಕ್ಕೂ ಹೆಚ್ಚು ರೋಗಗಳಿಗೆ ಔಷಧಿಯ ಗುಣ ಹೊಂದಿದೆ. ಪೋಷಕಾಂಶಗಳಾದ ವಿಟಮಿನ್ ಬಿ 6, ವಿಟಮಿನ್ ಸಿ, ಗ್ಲೂಕೋಸ್, ಕ್ಯಾಲ್ಸಿಯಮ್, ಮೈಗ್ನಿಸಿಯಮ್, ಪೋಟ್ಯಾಸಿಯಂ, ಐರನ್ ಸೇರಿದಂತೆ ಹಲವಾರು ವಿಟಮಿನ್‌ಗಳು ಇವೆ.

ಒಣದ್ರಾಕ್ಷಿ ಸೇವಿಸುವುದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ. ಪ್ರತಿ ನಿತ್ಯ ಅಂಗನವಾಡಿ, ಸರ್ಕಾರಿ, ಮೊರಾರ್ಜಿ, ಇನ್ನಿತರ ಶಾಲಾ ಮಕ್ಕಳಿಗೆ ಹಾಗೂ ಸೈನಿಕರಿಗೆ ಸರಕಾರಿ ಆಸ್ಪತ್ರೆ ರೋಗಿಗಳಿಗೆ ಕನಿಷ್ಠ 50 ಗ್ರಾಂ ಒಣದ್ರಾಕ್ಷಿ ವಿತರಿಸಬೇಕು. ಹೀಗಾಗಿ ದ್ರಾಕ್ಷಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ರಾಜ್ಯ ಸರ್ಕಾರ ನೀಡಿ ಖರೀದಿ ಮಾಡಬೇಕು ಎಂದು ಚಿಂತನ ಸಭೆಯಲ್ಲಿ ಚರ್ಚಿಸಿ ‌ಬಳಿಕ ನೇರವಾಗಿ ಡಿಸಿ ಕಚೇರಿಗೆ ಆಗಮಿಸುವ ಮೂಲಕ ಮನವಿಯನ್ನು ಸಲ್ಲಿಸಿದರು

ಕರ್ನಾಟಕ ರಾಜ್ಯದಲ್ಲಿ ದ್ರಾಕ್ಷಿ ಬೆಳೆಯನ್ನು ಅಂದಾಜು 90 ಸಾವಿರದಿಂರ 95 ಸಾವಿರ ಎಕರೆಯಲ್ಲಿ ಬೆಳೆಯುತ್ತಿದ್ದು, 7 ರಿಂದ 8.5 ಲಕ್ಷ ಮೆಟ್ರಿಕ್ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದೆ. ದೇಶದಲ್ಲಿಯೇ ಮಹಾರಾಷ್ಟ್ರದ ನಂತರದಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ, ಪ್ರತಿ ವರ್ಷ ದ್ರಾಕ್ಷಿ ಬೆಳೆಗಾರರು ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಗೆ ತುತ್ತಾಗಿ ಸಂಕಷ್ಟ ಸಿಲುಕುತ್ತಿದ್ದಾರೆ. ಆದರೆ ಸರ್ಕಾರ ದ್ರಾಕ್ಷಿ ಬೆಳೆಗಾರರ ನೆರವಿಗೆ ಬಂದಿಲ್ಲ.

ಈಗ ಒಣ ದ್ರಾಕ್ಷಿಯ ಬೆಲೆ ಸಂಪೂರ್ಣವಾಗಿ ಕುಸಿತಗೊಂಡಿದ್ದು 70 ರಿಂದ 100 ಕೆಜಿಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಮಾಡಿದರು. ಸಾಂಕೇತಿಕ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ತಮ್ಮ ಬೇಡಿಕೆ ಇಡೇರಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ದ್ರಾಕ್ಷೆ ಬೆಳೆಗಾರರು ಹಾಗೂ ಸ್ವಾಮಿಜಿಗಳು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Leave A Reply

Your email address will not be published.