ನವದೆಹಲಿ, ಡಿಸೆಂಬರ್ 31: ಐಆರ್ಸಿಟಿಸಿಯ ಹೊಸ ಇ-ಟಿಕೆಟಿಂಗ್ ವೆಬ್ಸೈಟ್ ಇಂದು ಬಿಡುಗಡೆಯಾಗಲಿದ್ದು, ಹಳೆಯ ವೆಬ್ಸೈಟ್ಗಿಂತ ಟಿಕೆಟ್ ಕಾಯ್ದಿರಿಸುವಿಕೆಯನ್ನು ಸುಲಭಗೊಳಿಸಿದೆ. ಪ್ರತಿದಿನ ಲಕ್ಷಾಂತರ ಜನರು ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟಿಕೆಟ್ ಕಾಯ್ದಿರಿಸಿರುತ್ತಾರೆ, ಹೀಗಾಗಿ ಹಲವು ಬಾರಿ ಸ್ಥಗಿತಗೊಳ್ಳುವುದು ಅಥವಾ ನಿಧಾನವಾಗುವ ಸಾಧ್ಯತೆಯಿತ್ತು.
ಹೀಗಾಗಿ ನವೀಕರಿಸಿದ ಅಧಿಕೃತ ಐಆರ್ಸಿಟಿಸಿ ಇ-ಟಿಕೆಟಿಂಗ್ ವೆಬ್ ಪೋರ್ಟಲ್ ಅನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಡಿಸೆಂಬರ್ 31, 2020 ರಂದು ಪ್ರಾರಂಭಿಸಲಿದ್ದಾರೆ.
ಭಾರತೀಯ ರೈಲ್ವೆ ಐಆರ್ಸಿಟಿಸಿ ಇ-ಟಿಕೆಟಿಂಗ್ ವೆಬ್ಸೈಟ್ ಮತ್ತು ಆ್ಯಪ್ ಎರಡನ್ನೂ ಅಪ್ಗ್ರೇಡ್ ಮಾಡಲಿದೆ. ಈಗ ಕೇವಲ ಒಂದು ನಿಮಿಷದಲ್ಲಿ 10 ಸಾವಿರ ರೈಲು ಟಿಕೆಟ್ಗಳನ್ನು ಏಕಕಾಲದಲ್ಲಿ ಕಾಯ್ದಿರಿಸಲಾಗಿದೆ. ಇಲ್ಲಿಯವರೆಗೆ, ಒಂದು ನಿಮಿಷದಲ್ಲಿ 7500 ಟಿಕೆಟ್ಗಳನ್ನು ಕಾಯ್ದಿರಿಸಬಹುದು. ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ಹೊಸ ವೆಬ್ಸೈಟ್ ಅನ್ನು ಇಂದು ಪ್ರಾರಂಭಿಸಲಿದ್ದಾರೆ. ಹೊಸ ವೆಬ್ಸೈಟ್ ಟಿಕೆಟ್ ಬುಕಿಂಗ್ನ ಹೆಚ್ಚು ಸ್ನೇಹಪರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಅನೇಕ ಬದಲಾವಣೆಗಳೊಂದಿಗೆ ಬುಕಿಂಗ್ ಸಹ ಹೆಚ್ಚು ವೇಗವಾಗಿರುತ್ತದೆ.