ದೆಹಲಿ, ಜೂನ್ 3: ಅಮೆರಿಕ, ಬ್ರೆಜಿಲ್ ನಂತರ ಸದ್ಯದ ಮಟ್ಟಿಗೆ ವಿಶ್ವದ ಕೊರೊನಾ ಹಾಟ್ಸ್ಪಾಟ್ ದೇಶ ಅಂದ್ರೆ ಅದು ಭಾರತ. ದಿನದಿಂದ ದಿನಕ್ಕೆ ಭಾರತದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಒಂದು ಹಂತದಲ್ಲಿ ಟಾಪ್ 10ರೊಳಗೂ ಇಲ್ಲದ ಭಾರತ ಈಗ ಟಾಪ್ ಮೂರಕ್ಕೆ ಪ್ರವೇಶ ಮಾಡಿದೆ. ಇಷ್ಟು ದಿನ ರಷ್ಯಾ ನಂತರ ಭಾರತ ಸ್ಥಾನ ಪಡೆದುಕೊಂಡಿತ್ತು. ಆದ್ರೀಗ, ರಷ್ಯಾ ದೇಶವನ್ನು ಹಿಂದಿಕ್ಕಿರುವ ಭಾರತ, ಕೊರೊನಾ ವೈರಸ್ ವಿಚಾರದಲ್ಲಿ ಮತ್ತಷ್ಟು ಆತಂಕಕ್ಕೆ ಹತ್ತಿರವಾಗಿದೆ.
ಹೊಸ ಪ್ರಕರಣ ಪಟ್ಟಿಯಲ್ಲಿ ಮಾತ್ರ ಸಕ್ರಿಯವಾಗಿರುವ ಕೇಸ್ಗಳ ಪಟ್ಟಿಯಲ್ಲೂ ಭಾರತ ಟಾಪ್ ನಾಲ್ಕರೊಳಗೆ ಗುರುತಿಸಿಕೊಂಡಿದೆ. ಈ ಅಂಕಿ ಅಂಶಗಳನ್ನು ಗಮನಿಸುತ್ತಿದ್ದರೆ, ದಿನೇ ದಿನೇ ಭಾರತ ಅಪಾಯಕ್ಕೆ ಸನಿಹವಾಗುತ್ತಿದೆ ಎಂಬ ಭಯ ಮೂಡುತ್ತಿದೆ. ಮುಂದೆ ಓದಿ….
ಜೂನ್ 3ರ ಬೆಳಿಗ್ಗೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ನಿನ್ನೆ ಒಂದೇ ದಿನ 8,909 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದಿನವೊಂದರಲ್ಲಿ ದಾಖಲಾದ ಗರಿಷ್ಠ ಸೋಂಕಿತರ ಸಂಖ್ಯೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಮೆರಿಕ ಮತ್ತು ಬ್ರೆಜಿಲ್ ದೇಶ ಬಿಟ್ಟರೇ ಭಾರತದಲ್ಲಿ ಅತಿ ಹೆಚ್ಚು ಹೊಸ ಕೇಸ್ ಪತ್ತೆಯಾಗಿದೆ. ಇದು ಸಹಜವಾಗಿ ಭಾರತಕ್ಕೆ ಆಂತಕಕಾರಿ ವಿಷಯವಾಗಿದೆ.