Ultimate magazine theme for WordPress.

Monsoon 2020: ಈ ವರ್ಷ ಸರಾಸರಿ ಮುಂಗಾರು ಸುರಿಯಲಿದೆ ಎಂದ ಹಮಾಮಾನ ಇಲಾಖೆ; ಅತಿ ಹೆಚ್ಚು ಕೃಷಿ ಉತ್ಪನ್ನ ಉತ್ಪಾದನೆ ನಿರೀಕ್ಷೆ

0

ಮುಂಬೈ: ಭಾರತದಲ್ಲಿ ಈ ವರ್ಷ ಸಾಧಾರಣ ಮುಂಗಾರು ಆಗಲಿದೆ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಹವಾಮಾನ ಇಲಾಖೆ ಬುಧವಾರ ಹೇಳಿದೆ. ಅಲ್ಲದೇ, ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಭಾರತ ಏಷ್ಯಾದ ಮೂರನೇ ಅತಿದೊಡ್ಡ ಕೃಷಿ ಉತ್ಪನ್ನ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಹೇಳಿದೆ.

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ನಾಯರ್ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದಲ್ಲಿ ಸಾಧಾರಣ ಅಥವಾ ಸರಾಸರಿ ಮುಂಗಾರು ಆಗಲಿದೆ. ಈ ಬಾರಿಯ ಮಾನ್ಸೂನ್ ಮಳೆ ದೀರ್ಘಾವಧಿಯ ಸರಾಸರಿ ಶೇ. 100 ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆ ಕೂಡ ಈ ಬಾರಿ ಶೇ.96ರಿಂದ ಶೇ.100ರವರೆಗೆ ಸರಾಸರಿ ಅಥವಾ ಸಾಮಾನ್ಯ ಮುಂಗಾರು ಆಗಲಿದೆ. ಜೂನ್​ನಿಂದ ಆರಂಭವಾಗುವ ಮಳೆ ಕಳೆದ 50 ವರ್ಷಗಳಿಗೆ ಹೊಲಿಕೆ ಮಾಡಿದ್ದಲ್ಲಿ ಮುಂದಿನ ನಾಲ್ಕು ತಿಂಗಳುಗಳ ಕಾಲ 88 ಸೆಂಟಿಮೀಟರ್​ನಷ್ಟು ಮಳೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳುವ ಮೂಲಕ ಕೃಷಿಕರಿಗೆ ಸಿಹಿ ಸುದ್ದಿ ನೀಡಿದೆ.

Leave A Reply

Your email address will not be published.