Ultimate magazine theme for WordPress.

ಕೊರೋನಾಗೆ ದೇಶದಲ್ಲಿ ಮೊದಲ ವೈದ್ಯ ಬಲಿ; ಮಧ್ಯಪ್ರದೇಶದ ಡಾ. ಶತ್ರುಘನ್ ಸಾವು

0

ಇಂದೋರ್(ಏ. 09): ಕೊರೋನಾ ವೈರಸ್ ವಿರುದ್ಧ ದೇಶಾದ್ಯಂತ ವೈದ್ಯ ಸಮೂಹ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿದೆ. ಈ ಮಾಡು ಇಲ್ಲ ಮಡಿ ಯುದ್ಧದಲ್ಲಿ ಮೊದಲ ವೈದ್ಯ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ವೈದ್ಯ ಡಾ. ಶತ್ರುಘನ್ ಪಂಜ್ವಾನಿ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ಧಾರೆ. ಇಂದೋರ್​ನ ಅರವೆಂದೋ ಆಸ್ಪತ್ರೆಯಲ್ಲಿ ಇಂದು ಮುಂಜಾವು 4ಗಂಟೆಗೆ ಡಾ. ಶತ್ರುಘನ್ ನಿಧನರಾಗಿದ್ದಾರೆಂದು ಭಾರತೀಯ ವೈದ್ಯಕೀಯ ಸಂಘ ದೃಢಪಡಿಸಿದೆ.

ಭಾರತದಲ್ಲಿ ಎರಡು ವಾರದಿಂದ ಲಾಕ್ ಡೌನ್ ಇದ್ದರೂ ಸೋಂಕು ಹರಡುವಿಕೆಯ ತೀವ್ರತೆ ಕಡಿಮೆಯಾಗಿಲ್ಲ. ಭಾರತದಲ್ಲಿ ಈವರೆಗೆ ಸೋಂಕಿಗೆ ಒಳಗಾಗಿರುವವರ ಸಂಖ್ಯೆ 6 ಸಾವಿರ ಗಡಿ ಸಮೀಪಿಸಿದೆ. ಇವತ್ತು ಗುರುವಾರ ಬೆಳಗ್ಗೆಯವರೆಗೆ ಸತ್ತವರ ಸಂಖ್ಯೆ 166ಕ್ಕೆ ಏರಿದೆ.

ಇದನ್ನೂ ಓದಿ: ಕೊರೋನಾ ಡ್ಯೂಟಿಯಲ್ಲಿದ್ದ ಮಹಿಳಾ ವೈದ್ಯರ ಕೆನ್ನೆಗೆ ಹೊಡೆದ ಯುವಕನ ವಿರುದ್ಧ ಕೇಸ್ ದಾಖಲು
ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಬಾಧೆ ಇದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಮಂದಿಗೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಕೂಡ ಇಲ್ಲಿ 70ಕ್ಕೂ ಹೆಚ್ಚಿದೆ. ಹಾಗೆಯೇ, ಆಂಧ್ರಪ್ರದೇಶ, ದೆಹಲಿ, ಕೇರಳ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 300ಕ್ಕೂ ಹೆಚ್ಚು ಇದೆ.

Leave A Reply

Your email address will not be published.