ವಿಡಿಯೋ ಕರೆ ಮೂಲಕ ತಾಯಿಯ ಅಂತ್ಯ ಸಂಸ್ಕಾರ ವೀಕ್ಷಿಸಿದ ಬಾಲಿವುಡ್ ನಟ!
ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ಶನಿವಾರದಂದು ವಿಧಿವಶರಾಗಿದ್ದಾರೆ. ಲಾಕ್ಡೌನ್ನಿಂದಾಗಿ ಮುಂಬೈನಲ್ಲಿ ಉಳಿದುಕೊಂಡಿರುವ ಇರ್ಫಾನ್ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.
95 ವರ್ಷದ ಸಯೀದಾ ಬೇಗಂ ರಾಜಸ್ತಾನದ ಜೈಪುರದಲ್ಲಿರುವ ಸ್ವಗೃಹದಲ್ಲಿ ಸಾವನ್ನಪ್ಪಿದ್ದರು. ಇತ್ತ ನಟ ಇರ್ಫಾನ್ ಮುಂಬೈ ಮನೆಯಲ್ಲಿ ಇದ್ದರು, ಕೊರೋನಾ ಲಾಕ್ಡೌನ್ನಿಂದಾ ಜೈಪುರಕ್ಕೆ ತೆರಳಲಾಗದೆ ವಿಡಿಯೋ ಕರೆಯ ಮೂಲಕ ತಾಯಿಯ ಅಂತ್ಯ ಸಂಸ್ಕಾರ ವೀಕ್ಷಿಸಿದ್ದಾರೆ.
ಇರ್ಫಾನ್ ತಾಯಿ ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಲಾಕ್ಡೌನ್ನಿಂದಾಗಿ ಸಯೀದಾ ಬೇಗಂ ಅಂತ್ಯಕ್ರಿಯೆಯಲ್ಲಿ ಕೆಲವರು ಮಾತ್ರ ಭಾಗಿಯಾಗಿದ್ದರು. ಜೈಪುರದ ಚುಂಗಿ ನಾಕಾ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಿದ್ದಾರೆ. ಬಾಲಿವುಡ್ ಕೆಲ ಸ್ಟಾರ್ಗಳು ನಟ ಇರ್ಫಾನ್ಗೆ ಫೋನ್ ಕರೆ ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ.