ಪ್ರಧಾನಿ ಆಗ್ತೀರಾ..? ಕೇಳಿದ್ದಕ್ಕೆ ಅಮಿತಾಭ್ ಬಚ್ಚನ್ ಕೊಟ್ಟ ಉತ್ತರವೇನು ಗೊತ್ತಾ?
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದರ ಜೊತೆಗೆ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಹೀಗಿರುವಾಗ ಅಭಿಮಾನಿಗಳು ಬಿಗ್ ಬಿಗೆ ನಾನಾ ತರಹದ ಪ್ರಶ್ನೆಗಳನ್ನು ಕೇಳುವುದು. ಅವರಿಂದ ಉತ್ತರವನ್ನು ಅಪೇಕ್ಷೆ ಪಡುವುದು ಸಾಮಾನ್ಯ. ಇತ್ತೀಚೆಗೆ ಟ್ವಿಟ್ಟರ್ನಲ್ಲಿ 12ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಅಮಿತಾಭ್ ಬಚ್ಚನ್ಗೆ ಅಭಿಮಾನಿಯೊಬ್ಬ ತರಲೆ ಪ್ರಶ್ನೆ ಕೇಳಿದ್ದಾನೆ. ಈ ದೇಶದ ಪ್ರಧಾನಿ ಆಗ್ತೀರಾ? ಎಂದಿದ್ದಾನೆ.
ಆದರೆ ಅಭಿಮಾನಿ ಕೇಳಿದ ಪ್ರಶ್ನೆಗೆ ಅಮಿತಾಭ್ ಬಚ್ಚನ್ ನಾಜೂಕಾಗಿ ಉತ್ತರ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಉತ್ತರಿಸಲು ಹೋಗುವುದಿಲ್ಲ. ಆದರೆ ಆಮಿತಾಭ್ ಬಚ್ಚನ್ ಮಾತ್ರ ‘ಬೆಳಿಗ್ಗೆ ಬೆಳ್ಳಿಗ್ಗೆ ಒಳ್ಳೇದು ಮಾತನಾಡಿ‘ ಎಂದು ಹೇಳುವ ಮೂಲಕ ಅಭಿಮಾನಿಯ ಬಾಯಿ ಮುಚ್ಚಿಸಿದ್ದಾರೆ.
ಅಮಿತಾಭ್ ಬಚ್ಚನ್ 80ರ ದರಶಕದಲ್ಲೇ ರಾಜಕೀಯವನ್ನು ಕಂಡಿದ್ದರು. ಹಾಗಾಗಿ ಬಿಗ್ ಬಿಗೆ ಇದು ಹೊಸದೇನಲ್ಲ. 80ರ ದಶಕದಲ್ಲಿ ಸಂಸದರಾಗಿದ್ದರು. ನಂತರ ವರ್ಷಗಳಲ್ಲಿ ರಾಜಕೀಯದಿಂದ ಹಿಂದೆ ಸರಿದರು.