ಬಿಗ್ ಬಿ ಜೊತೆ ನಟಿಸಲು ಚಾನ್ಸ್ ಸಿಕ್ಕಿದ್ದರು ನೋ ಎನ್ನುತ್ತಿದ್ದರು ಶ್ರೀದೇವಿ; ಯಾಕೆ ಗೊತ್ತಾ?
ನಟಿ ಶ್ರೀದೇವಿ ಅವರು ಅಮಿತಾಭ್ ಬಚ್ಚನ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದರು ನೋ ಎನ್ನುತ್ತಿದ್ದರು ಎಂದರೆ ನಂಬುತ್ತೀರಾ?. ಹೌದು. ಅಮಿತಾಭ್ ಮಾತ್ರವಲ್ಲ ಶ್ರೀದೇವಿ ಇಂತಹ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಆಫರ್ಗಳನ್ನು ಕೈಬಿಟ್ಟಿದ್ದಾರೆ. ಅದರೆ ಹಿಂದಿದೆ ಬಲವಾದ ಒಂದು ಕಾರಣ!
ಶ್ರೀದೇವಿ ಬಾಲ ನಟಿಯಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟವರು. ಮಾತ್ರವಲ್ಲದೆ, ಅಂದಿನ ಕಾಲಕ್ಕೆ ಇವರ ನಟನೆ ಸಾಕಷ್ಟು ಯುವಕರ ನಿದ್ದೆ ಕೆಡಿಸುವಂತೆ ಮಾಡಿತ್ತು . ಯುವಕರಂತೂ ನಟಿ ಶ್ರೀದೇವಿಯವರಿಗಾಗಿ ಥಿಯೇಟರ್ಗೆ ಬರುವಂತಹ ಸನ್ನಿವೇಷ ಕೂಡ ಇತ್ತು.
ಶ್ರೀದೇವಿ ಚಿತ್ರರಂಗ ಪ್ರವೇಶಿಸುವಾಗ ಅಮಿತಾಭ್ ಬಚ್ಚನ್ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. 1980ರ ವೇಳೆಗೆ ಇವರಿಬ್ಬರು ಬಾಲಿವುಡ್ ಅಂಗಳದಲ್ಲಿ ಭಾರಿ ಜನಪ್ರಿಯತೆಗಳಿಸಿದ್ದರು. ಇವರಿಬ್ಬರು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಆನಂತರದಿಂದ ಮತ್ತೆ ಒಟ್ಟಾಗಿ ಸಿನಿಮಾಗಳನ್ನು ಮಾಡಬೇಕು ಎಂದು ಅಭಿಮಾನಿಗಳು ಒತ್ತಾಸೆಯಾಗಿತ್ತು. ಆದರೆ ನಟಿ ಶ್ರೀದೇವಿ ಮಾತ್ರ ಹಿಂದೇಟು ಹಾಕುತ್ತಿದ್ದರು.