ಲಾಕ್ಡೌನ್ ನಡುವೆ ಅದ್ದೂರಿಯಾಗಿ ನಡೆಯುತ್ತಿದೆ ನಿಖಿಲ್ ಹೊಸ ಸಿನಿಮಾ ಕೆಲಸ..!
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಏಪ್ರಿಲ್ 17ರಂದು ಹಸೆಮಣೆ ಏರಲು ಸಜ್ಜಾಗಿ ನಿಂತಿದ್ದಾರೆ. ಕೊರೋನಾ ಭೀತಿ ನಡುವೆಯು ಕುಟುಂಬದವರು ಮೊದಲೇ ನಿಗದಿ ಮಾಡಿದ ದಿನಾಂಕದಂದೇ ಸರಳವಾಗಿ ಕಲ್ಯಾಣ ಕಾರ್ಯ ಮಾಡಿಸಲು ನಿರ್ಧರಿಸಿದ್ದಾರೆ. ಇನ್ನು ವಿವಾಹದ ಬಳಿಕವಷ್ಟೇ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚಲು ನಿಖಿಲ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಇದೀಗ ಲಾಕ್ಡೌನ್ನಿಂದ ಇಡೀ ಚಿತ್ರರಂಗ ಸ್ಥಗಿತಗೊಂಡಿದೆ.
ಇತ್ತ ನಿರ್ದೇಶಕ ಎ.ಪಿ ಅರ್ಜುನ್ ಕೂಡ ಫುಲ್ ಫ್ರೀಯಾಗಿದ್ದಾರೆ. ಹೀಗಾಗಿಯೇ ಈ ಹಿಂದಿನ ಪ್ರಾಜೆಕ್ಟ್ಗಳನ್ನು ಕೈ ಬಿಟ್ಟು ನಿರ್ದೇಶಕ ರು ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗಿದೆ.
ಈ ಹಿಂದೆ ನಿಖಿಲ್ ಹುಟ್ಟುಹಬ್ಬದಂದು ಪ್ರೊಡಕ್ಷನ್ ನಂ 1 ಹೆಸರಿನಲ್ಲಿ ಎಪಿ ಅರ್ಜುನ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದೀಗ ಇದರ ಕಥೆಯ ಸಿದ್ಧತೆಯಲ್ಲಿದ್ದಾರೆ. ಅಲ್ಲದೆ ಈಗಾಗಲೇ ಶೇ.50 ರಷ್ಟು ಸ್ಕ್ರಿಪ್ಟ್ ಕೆಲಸಗಳು ಮುಕ್ತಾಯವಾಗಿದೆಯಂತೆ. ಹಾಗೆಯೇ ಲಾಕ್ಡೌನ್ ಮುಂದುವರೆದರೆ ಅದರೊಳಗೆ ಕಥೆಯನ್ನು ಸಿದ್ಧಪಡಿಸಿಡಲು ಅರ್ಜುನ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಗಾಂಧಿನಗರದ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವಿದೇಶದಿಂದ ಕೆಲಸ ತೊರೆದು, ರೈತನಾಗಿ ಸಕ್ಸಸ್ ಕಾಣುವ ಯುವ ಉದ್ಯೋಗಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪಕ್ಕಾ ಕಮರ್ಷಿಯಲ್ ಚಿತ್ರವಾಗಲಿರುವ ಈ ಸಿನಿಮಾದಲ್ಲಿ ಅನೇಕ ರಂಗಭೂಮಿ ಕಲಾವಿದರೂ ಕೂಡ ಬಣ್ಣ ಹಚ್ಚಲಿದ್ದಾರೆ ಎಂದು ನಿರ್ದೇಶಕ ಅದ್ದೂರಿ ನಿರ್ದೇಶಕ ಅರ್ಜುನ್ ತಿಳಿಸಿದ್ದಾರೆ.