EBM News Kannada
Leading News Portal in Kannada

HBD Ranvit Shetty: ರಿಷಭ್​ ಶೆಟ್ಟಿ ಮಗನ ಮೊದಲ ಹುಟ್ಟುಹಬ್ಬ: ವೈರಲ್​ ಆಯ್ತು ಮತ್ತೊಂದು ವಿಡಿಯೋ..!

0

ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸದ್ಯ ಲಾಕ್​ಡೌನ್​ನಿಂದಾಗಿ ತಮ್ಮ ಊರಿನಲ್ಲಿ ಮಗ ಹಾಗೂ ಹೆಂಡತಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಮಗ ರಣ್​ವಿತ್​ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬ ಬಂದಿದೆ.

ನಿನ್ನೆಯಷ್ಟೆ ರಣ್​ವಿತ್​ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಊರಿನ ಮನೆಯಲ್ಲೇ ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ರಣ್​ವಿತ್​ನ ಮೊದಲ ಹುಟ್ಟುಹಬ್ಬವನ್ನು ಆಚಸಿದ್ದಾರೆ ರಿಷಭ್​ ಶೆಟ್ಟಿ. ಅದರ ವಿಡಿಯೋವನ್ನು ರಿಷಭ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರಿಷಭ್​ ಶೆಟ್ಟಿ ತಮ್ಮ ಮಗ ಹಾಗೂ ಅವನೊಂದಿಗೆ ತಾವು ತೆಗೆಸಿಕೊಂಡಿರುವ ಕೆಲವು ಚಿತ್ರಗಳನ್ನು ಸೇರಿಸಿ ಈ ವಿಡಿಯೋ ಮಾಡಿದ್ದಾರೆ. ಜೊತೆಗೆ ಕೇಕ್​ಗ ಕತ್ತರಿಸುವ ವಿಡಿಯೋವನ್ನೂ ಸೇರಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

ರಣ್​ವಿತ್​ ಹುಟ್ಟುಹಬ್ಬಕ್ಕೆ ರಿಷಭ್​ ಅವರ ಗೆಳೆಯ ರಕ್ಷಿತ್​ ಶೆಟ್ಟಿ ಸಹ ಶುಭ ಕೋರಿದ್ದಾರೆ.

Leave A Reply

Your email address will not be published.