EBM News Kannada
Leading News Portal in Kannada

‘ಕಾಂತಾರ – ಅಧ್ಯಾಯ 1’ ಟ್ರೇಲರ್ ಬಿಡುಗಡೆ

0


ಬೆಂಗಳೂರು: ಬಹುನಿರೀಕ್ಷಿತ ‘ಕಾಂತಾರ – ಅಧ್ಯಾಯ 1’ ಚಿತ್ರದ ಟ್ರೇಲರ್ ಹೊಂಬಾಳೆ ಫಿಲ್ಮ್ಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಅದ್ದೂರಿ ಸೆಟ್ ಹಾಗೂ ಹಿನ್ನೆಲೆ ಸಂಗೀತವನ್ನು ಈ ಟ್ರೇಲರ್ ನಲ್ಲಿ ನೋಡಬಹುದು.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ – ಅಧ್ಯಾ ಯ 1’ ಚಿತ್ರ ಅಕ್ಟೋಬರ್ 2ರ ವಿಜಯ ದಶಮಿಯಂದು ತೆರೆ ಕಾಣುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚಿತ್ರತಂಡ, “ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕತೆ ಪ್ರಾರಂಭವಾಗುತ್ತದೆ. ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಭ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ” ಎಂದು ಮಾಹಿತಿ ನೀಡಿದೆ.

ಈ ಚಿತ್ರದಲ್ಲಿ ಹೋರಾಟದ ಹಾದಿಯೊಂದಿಗೆ ನವಿರಾದ ಪ್ರೇಮಕತೆಯನ್ನೂ ಹೆಣೆದಿರುವುದನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ. ರಿಷಭ್ ಶೆಟ್ಟಿಗೆ ರುಕ್ಮಿಣಿ ವಸಂತ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

Leave A Reply

Your email address will not be published.