ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಲಾಸ್ ಎಂಜಲೀಸ್ನಲ್ಲಿ ರವಿವಾರ ಚಾಲನೆ ಸಿಕ್ಕಿದ್ದು, ಯುದ್ಧದಲ್ಲಿ ಜಪಾನಿ ರಾಜಪ್ರಭುತ್ವವನ್ನು ಬಿಂಬಿಸುವ ಐತಿಹಾಸಿಕ ಚಿತ್ರ ಶೋಗುನ್ ಹಲವು ಪ್ರಶಸ್ತಿಗಳನ್ನು ಪಡೆದಿದೆ.
ಇತರ ಹಿಟ್ ಚಿತ್ರಗಳೆಂದರೆ 23 ನಾಮನಿರ್ದೇಶನಗಳನ್ನು ಹೊಂದಿರುವ ಎಫ್ಎಕ್ಸ್ ನ ‘ದಿ ಬೇರ್’. ಇದು ಕೂಡಾ ಕೆಲ ಪ್ರಶಸ್ತಿಗಳನ್ನು ಬಾಚಿಕೊಡಿವೆ. ‘ದಿ ಬೇರ್’ ಮುಖ್ಯ ಬಾಣಸಿಗನಾಗಿ ಬಿಂಬಿಸಿಕೊಂಡಿರುವ ಜೆರೆಮಿ ಅಲೆನ್ ಉತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮರ್ಡರ್ಸ್ ಇನ್ ದ ಬಿಲ್ಡಿಂಗ್ (21 ನಾಮನಿರ್ದೇಶನಗಳು) ಮತ್ತು ಟ್ರೂ ಡಿಟೆಕ್ಟಿವ್: ನೈಟ್ ಕೌಂಟಿ (19 ನಾಮನಿರ್ದೇಶನಗಳು) ಮತ್ತು ದ ಕ್ರೌನ್ (18 ನಾಮನಿರ್ದೇಶನಗಳು) ಅಗ್ರ ನಾಮನಿರ್ದೇಶನಗಳನ್ನು ಹೊಂದಿರುವ ಚಿತ್ರಗಳಾಗಿವೆ.
ಉತ್ತಮ ಟಾಕ್ ಸೀರೀಸ್: ದ ಡೈಲಿ ಶೋ
ಉತ್ತಮ ರಿಯಾಲ್ಟಿ ಸ್ಪರ್ಧೆ: ದಿ ಟ್ರೇಲರ್ಸ್
ಉತ್ತಮ ಪೋಷಕ ನಟಿ: ಜೆಸಿಕಾ ಗನ್ನಿಂಗ್- ಬೇಬಿ ರೀನ್ಡೀರ್
ಡ್ರಾಮಾ ಸೀರೀಸ್ ಉತ್ತಮ ಪೋಷಕ ನಟ : ಬಿಲ್ಲಿ ಕ್ರುಡುಪ್ – ದಿ ಮಾರ್ನಿಂಗ್ ಶೋ
ಡ್ರಾಮಾ ಸೀರೀಸ್ ಉತ್ತಮ ಪೋಷಕ ನಟಿ : ಎಲಿಜಬೆತ್ ಡೆಬಿಕಿ – ದಿ ಕ್ರೌನ್
ಕಾಮಿಡಿ ಸೀರಿಸ್ ಉತ್ತಮ ಪೋಷಕ ನಟ : ಎಬಾನ್ ಮೊಸ್ ಬಚ್ರೂಹ್- ದಿ ಬೀರ್
ಕಾಮಿಡಿ ಸೀರಿಸ್ ಉತ್ತಮ ಪೋಷಕ ನಟಿ : ಲಿಝಾ ಕೊಲೊನ್ ಝಯಾಸ್- ದಿ ಬೀರ್
ಕಾಮಿಡಿ ಸೀರಿಸ್ ಉತ್ತಮ ನಟ: ಜೆರೆಮಿ ಅಲೆನ್ ವೈಟ್ – ದಿ ಬೀರ್
ಕಾಮಿಡಿ ಸೀರಿಸ್ ಉತ್ತಮ ನಟಿ: ಜೀನ್ ಸ್ಮಾರ್ಟ್- ಹ್ಯಾಕ್ಸ್