ತಿರುವನಂತಪುರಂ: ನಟ ಮೋಹನ್ ಲಾಲ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಅವರೊಂದಿಗೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದರು. ಲೈಂಗಿಕ ಕಿರುಕುಳದ ಆರೋಪದ ನಂತರ ನಟ ಸಿದ್ದೀಕ್ ಹುದ್ದೆ ತೊರೆದ ನಂತರ ಜಗದೀಶ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸುತ್ತಿರುವಾಗಲೇ ಈ ಅನಿರೀಕ್ಷಿತ ಬೆಳವಣಿಗೆ ನಡೆದಿದೆ.
ಅಸೋಸಿಯೇಷನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅದರ ಕೆಲವು ಸದಸ್ಯರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸಿದ ನಂತರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಅದು ಈಗಾMohanlal RESIGNS As AMMA Presidentಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ.
“ಕೆಲವು ಸಮಿತಿಯ ಸದಸ್ಯರ ವಿರುದ್ಧ ಕೆಲವು ನಟಿಯರು ಮಾಡಿದ ಆರೋಪಗಳ ಹಿನ್ನಲೆಯಲ್ಲಿ, ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು AMMA ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆಯ ನಂತರ ಹೊಸ ಸಮಿತಿಯನ್ನು ರಚಿಸಲಾಗುವುದು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಸಂಘವನ್ನು ಪುನರುಜ್ಜೀವನಗೊಳಿಸುವ ಮತ್ತು ಬಲಪಡಿಸುವ ಸಾಮರ್ಥ್ಯವಿರುವ ನಾಯಕತ್ವವು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ನಾವು ಎಲ್ಲರಿಗೂ ಕೃತಜ್ಞರಾಗಿರುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಟರಾದ ಜಗದೀಶ್, ಜಯನ್ ಚೇರ್ತಲ, ಬಾಬುರಾಜ್, ಕಲಾಭವನ್ ಶಾಜೋನ್, ಸೂರಜ್ ವೆಂಜರಮೂಡು, ಜಾಯ್ ಮ್ಯಾಥ್ಯೂ, ಸುರೇಶ್ ಕೃಷ್ಣ, ಟಿನಿ ಟಾಮ್, ಅನನ್ಯಾ, ವಿನು ಮೋಹನ್, ಟೊವಿನೋ ಥಾಮಸ್, ಸರಯು, ಅನ್ಸಿಬಾ ಮತ್ತು ಜೋಮೋಲ್ ಈಗ ವಿಸರ್ಜನೆಗೊಂಡ ಕಾರ್ಯಕಾರಿ ಸಮಿತಿಯ ಭಾಗವಾಗಿದ್ದರು.