EBM News Kannada
Leading News Portal in Kannada

‌ಕಾನ್ ಚಲನಚಿತ್ರೋತ್ಸವದಲ್ಲಿ ಫೆಲೆಸ್ತೀನೀಯರಿಗೆ ಬೆಂಬಲ ಸೂಚಿಸಿದ ನಟಿ ಕನಿ ಕುಸ್ರೂತಿ

0


ಕೇನ್ಸ್”: ತಮ್ಮ ಇತ್ತೀಚಿನ ಸಿನಿಮಾ “ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌” ಗಾಗಿ ಖ್ಯಾತಿ ಪಡೆದಿರುವ ನಟಿ ಕನಿ ಕುಸ್ರೂತಿ ಅವರು ಕಾನ್ 2024 ರಲ್ಲಿ ತಮ್ಮ ಚಿತ್ರದ ಸ್ಕ್ರೀನಿಂಗ್‌ಗಾಗಿ ಗುರುವಾರ ಆಗಮಿಸುವ ವೇಳೆ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಆಕೃತಿಯ ಬ್ಯಾಗ್ ಕೈಯ್ಯಲ್ಲಿ ಹಿಡಿದುಕೊಳ್ಳುವ ಮೂಲಕ ಫೆಲೆಸ್ತೀನ್‌ ಜನರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಈ ಬ್ಯಾಗ್ ಹಿಡಿದುಕೊಂಡು ಬರುತ್ತಿರುವ ಫೋಟೋಗಳು ಮತ್ತು ವೀಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಆಕ್ರಮಣ ಪೀಡಿತ ಗಾಝಾದಲ್ಲಿ ಕದನವಿರಾಮಕ್ಕೆ ನಟಿಯ ಬೆಂಬಲವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಕಟ್ ಮಾಡಿದ ಕಲ್ಲಂಗಡಿ ಹಣ್ಣಿನ ಮಾದರಿಯನ್ನು ಹೋಲುವ ಬ್ಯಾಗ್ ಹಿಡಿದುಕೊಂಡು ಚಿತ್ರದ ಇತರ ತಾರಾಗಣದೊಂದಿಗೆ ಕುಸ್ರೂತಿ ಆಗಮಿಸಿದ್ದರು.

ಕಲ್ಲಂಗಡಿ ಹಣ್ಣಿನ ಬಣ್ಣಗಳಾದ ಕೆಂಪು, ಹಸಿರು ಮತ್ತು ಅದರ ಕಪ್ಪು ಬೀಜಗಳು ಫೆಲೆಸ್ತೀನಿ ಧ್ವಜದ ಬಣ್ಣವಾಗಿರುವುದರಿಂದ ಈ ಹಣ್ಣು ಫೆಲೆಸ್ತೀನಿಯರಿಗೆ ಬೆಂಬಲದ ದ್ಯೋತಕವಾಗಿ ಬಿಟ್ಟಿದೆ.

ಕನಿ ಕುಸ್ರೂತಿ ಅವರನ್ನು ಮಲಯಾಳಂ ನಟಿ ದರ್ಶನಾ ರಾಜೇಂದ್ರನ್‌ ಸಹಿತ ಹಲವರು ಶ್ಲಾಘಿಸಿದ್ದಾರೆ.

ಕಾನ್ ನಲ್ಲಿ ಪಾಮ್‌ ಡಿʼಓರ್‌ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಏಕೈಕ ಚಿತ್ರ ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ ಆಗಿದೆ.

Leave A Reply

Your email address will not be published.