EBM News Kannada
Leading News Portal in Kannada

ಲಾಲ್ ಸಲಾಮ್ ಟೀಸರ್: ಕ್ರೀಡೆಯೊಂದಿಗೆ ಧರ್ಮವನ್ನು ಬೆರೆಸುವುದರ ವಿರುದ್ಧ ಧ‍್ವನಿ ಎತ್ತಿರುವ ರಜನಿಕಾಂತ್

0


Photo : Sun TV

Photo : Sun TV

ಚೆನ್ನೈ: ಮುಖ್ಯ ಸಂದೇಶವೊಂದರೊಂದಿಗೆ ರಜನಿಕಾಂತ್ ಮತ್ತೆ ಬೆಳ್ಳಿ ತೆರೆಗೆ ಮರಳಿದ್ದಾರೆ. ‘ಲಾಲ್ ಸಲಾಮ್’ ಚಿತ್ರದ ಮೊದಲ ಟೀಸರ್ ದೀಪಾವಳಿಯಂದು ಬಿಡುಗಡೆಯಾಗಿದ್ದು, ತಮ್ಮ ಮುಂಬರುವ ಈ ಚಿತ್ರದ ತುಣುಕಿನ ಮೂಲಕ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.

‘ಲಾಲ್ ಸಲಾಮ್’ ಚಿತ್ರವನ್ನು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಿಸಿದ್ದಾರೆ. ‘ಲಾಲ್ ಸಲಾಮ್’ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ನಿಮಿಷಗಳ ಈ ಟೀಸರ್ ಚಿತ್ರ ಜಗತ್ತಿನಲ್ಲಿ ಕಿಡಿ ಹೊತ್ತಿಸಿದೆ.

ಟೀಸರ್ ನ ತುಣುಕು ಗ್ರಾಮವೊಂದರಲ್ಲಿನ ಕ್ರಿಕೆಟ್ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಕೋಮು ಗಲಭೆಗಳು ಪ್ರಾರಂಭವಾಗುತ್ತಿದ್ದಂತೆಯೆ ಪರಿಸ್ಥಿತಿ ಬದಲಾಗುತ್ತದೆ. ಈ ತುಣುಕು ಮಧ್ಯದಲ್ಲಿ ತುಂಡಾಗುತ್ತದೆ.

ಅದರ ಮಧ‍್ಯ ಮೊಯಿದೀನ್ ಭಾಯಿ ಆಗಿ ಪ್ರವೇಶಿಸುವ ರಜನಿಕಾಂತ್, ಗೂಂಡಾಗಳೊಂದಿಗೆ ತಮ್ಮ ಸಾಹಸ ದೃಶ‍್ಯಗಳೊಂದಿಗೆ ಬಡಿದಾಡತೊಡಗುತ್ತಾರೆ. ಹಿನ್ನೆಲೆಯಲ್ಲಿ ಎ.ಆರ್.ರಹಮಾನ್ ಸಂಗೀತ ಕೇಳಿ ಬರುತ್ತಿರುತ್ತದೆ. “ನೀವು ಕ್ರೀಡೆಯೊಂದಿಗೆ ಧರ್ಮವನ್ನು ಬೆರೆಸಿ, ಮಕ್ಕಳ ಮನಸ್ಸನ್ನು ವಿಷಮಯಗೊಳಿಸಿದ್ದೀರಿ” ಎಂದು ರಜನಿಕಾಂತ್ ಹೇಳುವುದರೊಂದಿಗೆ ಆ ವೀಡಿಯೊ ಕೊನೆಗೊಳ್ಳುತ್ತದೆ.

ರಜನಿಕಾಂತ್ ಕೊನೆಯದಾಗಿ ಜೈಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಈ ವರ್ಷದ ಬಹು ದೊಡ್ಡ ಯಶಸ್ವಿ ತಮಿಳು ಚಿತ್ರವಾಗಿತ್ತು. 2023ರ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿತ್ತು.

Leave A Reply

Your email address will not be published.